DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


SADAA DIARY – 5

SADAA DIARY – 5 www.sadanandagowda.com

Dear Friends,

ಸದಾ ಡೈರಿ

ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ ಘಟನೆಗಳು ಹಲವು. ಬುಧವಾರ ಕೂಡಾ ಇಂತಹುದೇ ಒಂದು ಭಾವನಾತ್ಮಕ ಸಂತಸದ ಕ್ಷಣ ರಾತ್ರಿ ಇಡೀ ನನ್ನನ್ನು ತೋಯ್ದಿತು. ಮನೆ ಹೊರಗೆ ಭಾರೀ ಮಳೆ…ಮನದ ಒಳಗೆ ಈ ಸಂತೃಪ್ತಿಯ ಭಾವಧಾರೆ.
ಮುಸ್ಸಂಜೆಯ ಸಮಯ. ಕಾರ್ಮೋಡ ನಗರವನ್ನು ಇನ್ನಷ್ಟು ಕತ್ತಲಾಗಿಸಿತ್ತು. ಸುಯ್ಯನೇ ಬೀಸುತ್ತಿದ್ದ ಭಾರೀ ಗಾಳಿ ಮಲೆನಾಡನ್ನು ನೆನಪಿಸಿತ್ತು. ನಾನು ನನ್ನ ಪ್ರಚಾರವನ್ನು ಬಿರುಸಾಗಿಸಿದ್ದೆ. ಮಳೆ ಬರುವ ಮುನ್ನ ಪ್ರಚಾರ ಮುಗಿಸಿ ಮನೆ ಸೇರುವ ತವಕ. ಆದರೆ ಹೋದಲ್ಲೆಲ್ಲ ಭರ್ಜರಿ ಸ್ವಾಗತ. ಬಿರುಗಾಳಿಗಿಂತಲೂ ಬಿರುಸಾಗಿತ್ತು ಮೋದಿಜೀ ಗಾಳಿ.
ಆರ್ಟಿ ನಗರ ಬಳಿ ನನ್ನ ಕಾರು ಸಂಚರಿಸುತ್ತಿತ್ತು. ಕಾರ್ಯಕರ್ತರ ದಂಡೇ ಎದುರಾಯಿತು. ಕಾರಿನಿಂದ ಇಳಿದು ಅವರಲ್ಲಿ ಮಾತನಾಡ ಹೋದೆ. ದಾರಿಯಲ್ಲಿ ಹತ್ತಾರು ಮಹಿಳೆರು ಸೊಪ್ಪು ತರಕಾರಿ ಮಾರುತ್ತಿದ್ದರು.

ನನ್ನನ್ನು ನೋಡಿದ ಕೂಡಲೇ ಅವರ ಮುಖಚರ್ಯೆಯೇ ಬದಲಾಯಿತು. ನೋಡ್ರಿ ಎಕ್ಸ್ ಸಿಎಂ ಬಂದ್ರು…ಗೌಡ್ರು ಬಂದ್ರು ಅಂತಾ ಅವರು ಹೇಳಲಾರಂಭಿಸಿದರು. ನನ್ನಡೆಗೆ ಧಾವಿಸಿದರು..ಹಿಂಜರಿಕೆಯಿಂದಲೇ ಮಾತನಾಡಿದರು. ನನ್ನ ಸರ್ಕಾರದ ನಾನಾ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ನಗುತ್ತಾ ಆಶೀರ್ವದಿಸಿ ಕಳುಹಿಸಿದರು.
ಈ ಘಟನೆ ಇಡೀ ದಿನ್ನ ನನ್ನನ್ನು ಆತ್ಮ ವಿಮರ್ಶೆಗೆ ಹಚ್ಚಿತು. ಸಿ.ಎಂ. ಆಗಿದ್ದ ಅಲ್ಪ ಅವಧಿಯಲ್ಲಿ ನಾನು ಜಾರಿಗೆ ತಂದ ಕಾರ್ಯಕ್ರಮಗಳು ನನಗೆ ಅರಿವಿಲ್ಲದಂತೆ ಎಷ್ಟು ಜನರ ಬದುಕು ಬೆಳಗಿಸಿವೆ! ನಾನು ಸಿ.ಎಂ.ಆಗಿದ್ದು ಸಾರ್ಥಕ ಅನ್ನುವ ಧನ್ಯತೆಯ ಕ್ಷಣ ಮೂಡಿದ ಸಂದರ್ಭವದು.

 

ಕಡಲೆ ಕಾಯಿ ಮಹಾತ್ಮೆ!

ಈ ಘಟನೆ ನೆನೆದರೆ ನನ್ನಲ್ಲಿ ಈಗಲೂ ನಗೆ ಮೂಡುತ್ತದೆ. ನಂಬಲು ಕಷ್ಟ; ಆದರೆ ಸತ್ಯ ಘಟನೆಯಿದು.

ದಾಸರಹಳ್ಳಿ ಪ್ರದೇಶದಲ್ಲಿ ಮನೆ ಮನೆ ಭೇಟಿಯಲ್ಲಿ ಬ್ಯುಸಿಯಾಗಿದ್ದೆ. ನಾನಾ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಸಾವಿರಾರು ಜನರನ್ನು ಭೇಟಿಯಾಗಿ ಮತ ಹಾಕಿ ಬೆಂಬಲಿಸುವಂತೆ ಕೋರಿದೆ. ಸಿಹಿ ಕೊಟ್ಟು ಆಶೀರ್ವದಿಸಿದವರು ನೂರಾರು ಜನ. ಹೋದ ಕಡೆಯಲ್ಲೆಲ್ಲ ಭರ್ಜರಿ ಸ್ವಾಗತ.
ರಸ್ತೆಯಲ್ಲಿ ನಡೆದುಕೊಂಡು ಬೆಂಬಲಿಗರೊಂದಿಗೆ ಹೋಗುತ್ತಿದ್ದಾಗ ಒಬ್ಬ ಕಡಲೆ ವ್ಯಾಪಾರಿ ಎದುರಾದ. ಎಂದಿನಂತೆ ಆತನ ಯೋಗಕ್ಷೇಮ ವಿಚಾರಿಸಿ, ಮತ ಹಾಕಲು ಕೋರಿದೆ.

ನಾನು ಅದೇನ್ ಮೋಡಿ ಮಾಡಿದ್ದೆನೋ ಏನೋ? ಆತ ತನ್ನ ಕಡಲೆ ಕೈ ವ್ಯಾಪಾರ ನಿಲ್ಲಿಸಿ, ಮಾತು ಆರಂಭಿಸಿದ…ಸರ್ ನಿಮ್ಮಂತಹ ನಾಯಕರು ನಮಗೆ ಸದಾ ಬೇಕು. ನೀವು ನೂರ್ಕಾಲ ಜನ ಸೇವೆ ಮಾಡಬೇಕು. ಒಳ್ಳೆ ಆರೋಗ್ಯ ಕಾಪಾಡಿಕೊಳ್ಳಲು ಕಡಲೆ ಕಾಯಿ ಒಳ್ಳೇದು. ದಿನ ತಿಂದು ಆರೋಗ್ಯವಾಗಿರಿ ಅಂತೇಳಿ ಒಂದು ಪೊಟ್ಟಣ ತುಂಬಾ ಕಡಲೆ ಕೊಟ್ಟ.
ಜನರ ಪ್ರೀತಿಗೆಷ್ಟು ಮುಖಗಳು! ಅವರ ಋಣ ಭಾರ ಸದಾ ನನ್ನ ಮೇಲಿದೆ. ನಿಮ್ಮಂತಹ ಬೆಂಬಲಿಗರ ಹಿತ ಕಾಪಾಡುವುದೆ ನನ್ನ ಪರಮ ಗುರಿ ಎಂದು ಆಶ್ವಾಸನೆ ಕೊಟ್ಟು ನನ್ನ ಪ್ರಚಾರ ಕಾರ್ಯ ಮುಂದುವರಿಸಿದೆ.

ವಂದನೆಗಳೊಂದಿಗೆ,
ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ.

*******************************************************************

When unknown women blessed me…!

Wednesday was a memorable day for me for many reasons. Like all these days, I was busy in campaign. But cloudy weather had made the whole day bit dull. But by evening, dark clouds started to hover around the city. Breeze made the atmosphere more chilling. City weather become like Malnad region. My sixth sense started to tell that heavy rain definitely hit the city soon. It would be the first rain of the season. My mind wished that let rain bring prosperity to the farming community who were at the receiving end due to the anti farmer policies of the UPA government led by Congress. My mind wished that let Modiji’s wave sweep more strongly than the breeze and thunderstorm.

When I reached near RT Nagar, I found my supporters. So I decided to get down from the car to speak to them. But I didn’t notice few women road side vendors who were selling vegetables on the street. But they had noticed me. When I got down from the car, they immediately rushed toward me shunning their business. They surrounded me and spoke about the pro poor projects launched by my government. They wished me all the success in life and assured of supporting me.

I was stunned for few moments. I never thought even in my wildest dreams that my projects will touch people from cross sections of the society. Whole night I was struck with emotions. Faces of those women vendors still in my eyes.

 

Health tips from ground nut seller

What health tips a politician can take from a ground nut seller. Believe nor not; a ground nut seller suggested me to eat ground nuts every day to maintain good health.

I was busy campaigning at Dasarahalli. It was a door to door campaign. I met several thousand people. Every one received me with warmth and assured of support. While I was walking on the main road seeking votes, I met a ground nut seller who was selling ground nuts on street side. Like usual, I requested him to vote for me to make NaMo prime minister of this country. There was nothing unusual about it.

But ground nut seller looked at my eyes for seconds. Then hold my hands. “Sir, we need good leaders like you. I want you to serve this country for many more years. So you must keep yourself healthy . So it is better to east ground nuts every day,” he said.

I smiled. He gave a pocket for groundnut saying sir, please don’t ignore my advise. I want you to serve this country for many more years.

His voice still echoing in my ears.

Thanking you,

Mr. D.V. Sadananda Gowda
BJP candidate, Bengaluru (North)


Follow Me

Facebook : https://www.facebook.com/sadanandagowda.official

Twitter : https://twitter.com/DVSBJP


080-2341 2999   |   sadanandagowda@yahoo.com   |   www.sadanandagowda.com
#7A, ITI Layout, 2nd Cross, New BEL Road, Bangalore – 560 094
Copyright©2014 D V Sadananda Gowda All Rights Reserved. Powered by Dhyeya

Website last updated on February 26, 2020 @ 8:31 PM