DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


SADAA DIARY – 4

–>

SADAA DIARY – 4 www.sadanandagowda.com

Dear Friends,

ನಿವೃತ್ತ ಉಪನ್ಯಾಸಕರೊಂದಿಗೆ ನೇರವಾಗಿ ಮಾತನಾಡಿದ ಮುಖ್ಯಮಂತ್ರಿ

ಅವರ ಹೆಸರು ಜಿ.ಆರ್. ರಾಮದಾಸ್. 71 ವರ್ಷ ವಯಸ್ಸಿನ ಉತ್ಸಾಹಿ ನಿವೃತ್ತ ಉಪನ್ಯಾಸಕರು. 1998ರಲ್ಲಿ ಯುಜಿಸಿ ವೇತನ ಭತ್ಯೆಯನ್ನು ಪುನರ್‌ವಿಮರ್ಶಿಸಿತ್ತು. ಯುಜಿಸಿ ಪುನರ್ ವಿಮರ್ಶಿತ ಪೇ ಸ್ಕೇಲ್ ಅನ್ವಯ ತಮಗೆ ಬರಬೇಕಾದ ಬಾಕಿ ಮೊತ್ತಕ್ಕೆ ಅವರು ಹೋರಾಟ ನಡೆಸಿದ್ದರು. ಈ ಸಂಬಂಧ ಅಧಿಕಾರಿಗಳಿಗೆ ಹಲವಾರು ಜ್ಞಾಪನಾ ಪತ್ರಗಳನ್ನು ಕೊಟ್ಟಿದ್ದರು. ಆದರೂ ಎಳ್ಳಷ್ಟೂ ಪ್ರಯೋಜನವಾಗಿರಲಿಲ್ಲ. ಅವರ ಧ್ವನಿಯನ್ನು ಕೇಳುವವರೇ ಇರಲಿಲ್ಲ.

ಅಕ್ಟೋಬರ್ 2011 ಮುಂಜಾನೆಯ ಚುಮು ಚುಮು. ಅವರಿಗೊಂದು ಆಶ್ಚರ್ಯ ಕಿಸೆಯಲ್ಲಿದ್ದ ಮೊಬೈಲ್ ರಿಂಗಣದೊಂದಿಗೆ ಕಾದಿತ್ತು. ಸ್ವತಃ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರೇ ರಾಮ್‌ದಾಸ್ ಅವರಿಗೆ ಕರೆ ಮಾಡಿದ್ದರು. ಅವರ ಅಹವಾಲನ್ನು ಆಲಿಸಿದ್ದರು. ಸಾಂತ್ವನದ ನುಡಿಗಳೊಂದಿಗೆ ಸಮಸ್ಯೆಗೆ ಪರಿಹಾರ ತೋರುವ ಮಾರ್ಗವನ್ನು ಸೂಚಿಸಿದ್ದರು.
ಜಿ.ಆರ್. ರಾಮದಾಸ್ ಅಂದಿನ ಘಟನಾವಳಿಗಳನ್ನು ಮೆಲುಕು ಹಾಕುತ್ತಾರೆ. ಮುಖ್ಯಮಂತ್ರಿ ಸದಾನಂದಗೌಡರ ವೈಶಾಲ್ಯತೆಯನ್ನು ಕೊಂಡಾಡುತ್ತಾರೆ. ಅವರು ಹೇಳುವುದೇನು ಅವರ ಮಾತುಗಳಲ್ಲೇ ಕೇಳಿ.

ನಿವೃತ್ತಿಯ ನಂತರ ನಾನು ಸಾಕಷ್ಟು ಸಂಸ್ಥೆಗಳಲ್ಲಿ ಗೌರವಾನ್ವಿತ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಅಂದು ಬೆಳಿಗ್ಗೆ 9 ಗಂಟೆಗೆ ನಾನು ಕಾಲೇಜೊಂದಕ್ಕೆ ಹೋಗಲು ಸಿದ್ಧನಾಗಿದ್ದೆ. ಇದ್ದಕ್ಕಿದ್ದಂತೆ ನನ್ನ ಮೊಬೈಲು ರಿಂಗಣಿಸಿತು. ನೋಡಿದರೆ ಅದ್ಯಾವುದೋ ಅನಾಮಧೇಯ ಸಂಖ್ಯೆ. ಆ ಕ್ಷಣದಲ್ಲಿ ನಾನಂದುಕೊಂಡೆ, ಯಾರೋ ವಿದ್ಯಾರ್ಥಿಯ ಕರೆ ಇರಬೇಕು ಅಂತ. ಆದರೆ ಕರೆ ಸ್ವೀಕರಿಸಿದಾಗ ನನ್ನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಕರೆ ಮಾಡಿದವರು ಮತ್ಯಾರು ಅಲ್ಲ.. ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು.

ದೂರವಾಣಿಯಲ್ಲಿ ಅವರು ತಮ್ಮ ಪರಿಚಯ ಮಾಡಿಕೊಂಡಾಗ, ನನ್ನಲ್ಲಿ ಎಲ್ಲೋ ಸಂಶಯದ ಸುಳಿ ಸುಳಿದಿತ್ತು. ಯಾರೋ ವಂಚಿಸುತ್ತಿರಬಹುದು ಎನ್ನುವ ಭಾವನೆ ಮೂಡಿ ಮನಸ್ಸು ಉದ್ವೇಗಗೊಂಡಿತ್ತು. ಕೋಪದಿಂದ ನಾನು ಕಿರುಚಿದೆ. ನಿಜ ಹೇಳಿ ಯಾರು ನೀವು? ಅಂತ ಪ್ರಶ್ನಿಸಿದೆ. ಆಗ ಆ ಕಡೆಯಿಂದ ದೂರವಾಣಿ ಕರೆ ಮಾಡಿದವರು ಮೃದುವಾಗಿಯೇ, ಸರ್ ತಪ್ಪು ತಿಳಿದುಕೊಳ್ಳಬೇಡಿ. ನನ್ನ ಧ್ವನಿ ನಿಮಗೆ ಗುರುತು ಹತ್ತುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಆ ಕ್ಷಣ ನನಗೆ ನಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂಬುದು ತಿಳಿಯಿತು. ಕೂಡಲೇ ಮುಖ್ಯಮಂತ್ರಿಯವರೊಡನೆ ಕ್ಷಮೆ ಯಾಚಿಸಿದೆ. ನನ್ನ ಅಹವಾಲನ್ನು ಅವರ ಮುಂದೆ ಮಂಡಿಸಿದೆ. ಅವರು ಶಾಂತಚಿತ್ತರಾಗಿಯೇ ನನ್ನೆಲ್ಲಾ ಸಮಸ್ಯೆಗಳನ್ನು ಕೇಳಿದರು. ತಮ್ಮ ಸಂಪುಟದ ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಅವರ ಇ ಮೇಲ್ ವಿಳಾಸವನ್ನು ಕೊಟ್ಟರು.
ಸದಾನಂದಗೌಡರು ಸಕಾಲ ಯೋಜನೆಯನ್ನು ಜಾರಿಗೊಳಿಸಿದ ನಂತರ ನಾನು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಇ ಮೇಲ್ ಮಾಡಿದ್ದೆ. ಕೇವಲ ರಾಜಕೀಯ ಉದ್ದೇಶಗಳಿಗಾಗಿ ಇಂತಹ ಯೋಜನೆಗಳನ್ನು ಜಾರಿಮಾಡಬೇಡಿ. ನಿಮ್ಮ ಸಕಾಲ ಯೋಜನೆಯಲ್ಲಿ ನಾನು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಿದೆಯೇ? ಎಂದು ಪ್ರಶ್ನಿಸಿದ್ದೆ. ಆ ನಂತರವಷ್ಟೇ ಇಷ್ಟೆಲ್ಲಾ ಬೆಳವಣಿಗೆಗಳು ನಡೆದವು.

ಆಗ ಮುಖ್ಯಮಂತ್ರಿಗಳು ಸಾವಧಾನದಿಂದಲೇ ಉತ್ತರಿಸಿದರು. ಹೌದು, ನಿಮ್ಮೆಲ್ಲಾ ಸಮಸ್ಯೆಗಳಿಗೂ ಸಕಾಲದಲ್ಲಿ ಪರಿಹಾರವಿದೆ ಎಂದರು.

ರಾಮ್‌ದಾಸ್ ತಮ್ಮ ವಿವರಣೆಯನ್ನು ಮತ್ತೂ ಮುಂದುವರೆಸಿದರು. ಇತ್ತೀಚೆಗೆ ತಾನೇ ಸದಾನಂದ ಗೌಡ ಅವರು ತಮ್ಮ ಅಪಾರ್ಟ್‌ಮೆಂಟ್‌ಗೆ ಭೇಟಿ ಕೊಟ್ಟಿದ್ದರು. ಶುಭ ಹಾರೈಸಿದ್ದರು. ನನಗೆ ಸದಾನಂದ ಗೌಡರಲ್ಲಿ ಸಾಕಷ್ಟು ವಿಶ್ವಾಸವಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆಂಬ ವಿಶ್ವಾಸವಿದೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಸಕಾಲ ಯೋಜನೆಯನ್ನು ಕೇಂದ್ರ ಮಟ್ಟದಲ್ಲೂ ಜಾರಿಗೊಳಿಸುತ್ತಾರೆ ಎನ್ನುವ ನಿರೀಕ್ಷೆ ನನ್ನದು. ನಿಮ್ಮದು?

ವಂದನೆಗಳೊಂದಿಗೆ,
ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ.

*******************************************************************

When a retired professor received a call from Chief Minister

He is waging a lone battle against the officials from state higher education department over releasing of his arrears as per the UGC pay scale from last 14 years. This arrears controversy was regarding the revised pay scale announced by the UGC in 1998. But officials never cared for his memorandums, appeals!. But 71 year old Mr. GR Ramadas, a retired professor of Acharya Pathashala of the city was shocked when he received a call from none other than Chief Minister of the State on a rainy morning in October 2011 to discuss the problem and find out a solution.

Memory of speaking with CM is still afresh in his mind. Mr. Ramadas explains…After my retirement I was serving various institutions as honorary faculty. It was around 9 AM and I was getting ready to goto college. Suddenly my mobile ranged up. It was an unknown number. I picked up presuming any student or relative!. But the person who was called introduced himself as Mr. D V Sadananda Gowda, CM, Karnataka. I thought some is playing a frank and it made me angry. I started shouting at him. But the person who was speaking from other side said, sir please don’t mistake. Can’t you recognise my voice? then I realised that I am speaking to Mr. Gowda. I apologised. Mr. Gowda listened about my problem and gave the email id of then law minister Mr. S Suresh Kumar to find a solution.

All started with my email to Mr. Gowda when he announced introduction of Sakala scheme. My contention was that Mr.Gowda should not launch such a project for political gains as he has a great place in state politics. I had explained my problem in the mail and questioned
whether Sakala scheme has any solution for the problem. He informed me that he is reading all the complaints when he is travelling and Sakala will definitely solve such problems.

Mr. Ramadas explained recently Mr. Gowda visited my apartments. I wished him all the best. I have strong confidence that Mr. Gowda will win with a huge margin and become a minister in Mr. Modi government and take Sakala scheme even to central government.!

Thanking you,

Mr. D.V. Sadananda Gowda
BJP candidate, Bengaluru (North)


Follow Me

Facebook : https://www.facebook.com/sadanandagowda.official

Twitter : https://twitter.com/DVSBJP


080-2341 2999   |   sadanandagowda@yahoo.com   |   www.sadanandagowda.com
#7A, ITI Layout, 2nd Cross, New BEL Road, Bangalore – 560 094
Copyright©2014 D V Sadananda Gowda All Rights Reserved. Powered by Dhyeya

Website last updated on October 26, 2020 @ 3:59 AM