DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


SADAA DIARY – 3

 

SADAA DIARY – 3 www.sadanandagowda.com

Dear Friends,

ಮತ್ತೆ ಮತ್ತೆ ಕಾಡುತಿಹ ಭಾವಲಹರಿ!

ಮಂಗಳವಾರದ ಮುಸ್ಸಂಜೆ ಸಮಯದಲ್ಲಿ ನಡೆದ ಈ ಘಟನೆ, ಅದೇಕೋ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ಅದು ನನ್ನ ಕರ್ತವ್ಯದ ಕರೆಯಾಗಿತ್ತು. ಆದರೆ ಅದು ಯುವಕನೊಬ್ಬನ ಬದುಕನ್ನು ಈ ರೀತಿಯಾಗಿ ಬದಲಾಯಿಸಬಹುದು ಎಂದು ನಾನು ಆ ಕಡತಕ್ಕೆ ಸಹಿ ಹಾಕಿದ ಕ್ಷಣದಲ್ಲಿ ಭಾಸವಾಗಿರಲಿಲ್ಲ. ಆದರೆ ವರ್ಷಗಳು ಉರುಳಿದ ಬಳಿಕ ನನಗೀಗ ಧನ್ಯತೆಯ ಭಾವ ತಂದುಕೊಟ್ಟ ಘಟನೆ ಇದು.

ಮಂಗಳವಾರ ಇಡೀ ದಿನ ನಾನು ಪ್ರಚಾರ ಕಾರ್ಯದಲ್ಲಿ ತಲ್ಲೀನನಾಗಿದ್ದೆ. ಸಂಜೆ ಮೋದಿಜೀಯವರ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೊಸೂರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೆ. ವಿಪರೀತ ವಾಹನ, ಜನ ಸಂದಣಿ. ಎಲ್ಲವೂ ಮೋದಿಜೀಯವರ ಮಾಯಾಜಾಲ!. ನನ್ನ ಚಾಲಕ ಕೂಡಾ ಸ್ವಲ್ಪ ವೇಗವಾಗೇ ಚಾಲನೆ ಮಾಡುತ್ತಿದ್ದ. ಸಮಾವೇಶದ ಸ್ಥಳಕ್ಕೆ ಬೇಗ ತಲುಪುವ ಉದ್ದೇಶ. ಏಕೆಂದರೆ ಅಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಏಕಕಾಲದಲ್ಲಿ ಸಂಪರ್ಕಿಸಲು ಸಾಧ್ಯವಾಗುತ್ತಿತ್ತು.

ಆದರೆ ರಸ್ತೆ ಮಧ್ಯೆ ಒಬ್ಬ ದ್ವಿಚಕ್ರ ವಾಹನ ಸವಾರ ನನ್ನನ್ನೇ ಫಾಲೋ ಮಾಡುತ್ತಿದ್ದಾನೆ ಎಂದೆನಿಸಿತು. ಎರಡು-ಮೂರು ಕಡೆಗಳಲ್ಲಿ ಆತ ನನ್ನ ವಾಹನವನ್ನು ಓವರ್ಟೇಕ್ ಮಾಡಲು ಯತ್ನಿಸಿದ. ನನಗೇಕೋ ಇದು ವಿಚಿತ್ರ ಎನಿಸಿತು. ಆದರೂ ಅದರ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ.

ಆದರೆ ಮೋದಿ ಸಮಾವೇಶದ ಸ್ಥಳ ಇನ್ನೇನು ತಲುಪಬೇಕು ಅನ್ನುವಷ್ಟರಲ್ಲಿ ಆತ ನನ್ನ ವಾಹನವನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ. ವಾಹನದ ಎದುರೇ ಬೈಕ್ ನಿಲ್ಲಿಸಿದ. ನನ್ನತ್ತ ಓಡಿ ಬರಲಾರಂಭಿಸಿದ. ಇದೇನ್ ವಿಚಿತ್ರ. ಈ ಯುವಕ ಹೀಗೆ ಏಕೆ ಮಾಡ್ತಾ ಇದ್ದಾನೆ? ಅನ್ನೋ ಆಲೋಚನೆಗೆಳು ನನ್ನಲ್ಲಿ ಮೂಡಿದವು. ಜೊತೆಗೆ ಟ್ರಾಫಿಕ್ ಜಾಮ್ ಆಗಬಹುದೆಂಬ ಹೆದರಿಕೆ.

ಬೈಕ್ ನಿಲ್ಲಿಸಿದ ಯುವಕ ನನ್ನ ಕಾರಿನ ಕಿಟಕಿ ಬಳಿ ಬಂದ. ಆತನ ಕಣ್ತುಂಬ ನೀರು. ನನಗೆ ದಿಗ್ಬ್ರಮೆ!. ಬಂದವನೆ ನನ್ನ ಅಂಗೈಯನ್ನು ಎರಡೂ ಕೈಗಳಲ್ಲಿ ಗಟ್ಟಿಯಾಗಿ ಹಿಡಿದ.
ಏನಾಯ್ತು ಅಂಥಾ ಕೇಳಿದ್ರೆ ಬರೀ ಅಳು! ಅಯೋ ಶಿವನೇ!

ಕೆಲವು ಕ್ಷಣಗಳ ನಂತರ ಸಾವರಿಸಿಕೊಂಡ ಆ ಯುವಕ ಹೇಳಿದ್ದಿಷ್ಟು. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆತ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹಣ ಇರಲಿಲ್ಲ. ನನ್ನ ಕಚೇರಿಗೆ ಧನ ಸಹಾಯ ಕೇಳಿ ಅರ್ಜಿ ಸಲ್ಲಿಸಿದ್ದ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೂಡಲೇ ಹಣ ಮಂಜೂರಾಯ್ತು. ಚಿಕಿತ್ಸೆ ಪಡೆದ ಆತ ಈಗ ಒಳ್ಳೆ ಸಂಪಾದನೆ ಮಾಡುತ್ತಿದ್ದಾನೆ. “ಸರ್..ಈ ಬೈಕ್ ನಿಮ್ಮ ಆಶೀರ್ವಾದ. ನೀವಂದು ಹಣ ಸಹಾಯ ಮಾಡಿರತ್ತಿದ್ದರೆ, ನಾನು ಈಗ ಬೀದಿ ಪಾಲಾಗುತ್ತಿದ್ದೆ. ಕುಟುಂಬ ಕಣ್ಣೀರಲ್ಲಿ ಕೈ ತೊಳಿತಿರಬೇಕಿತ್ತು,” ಅಂದ.

ನಾನು ಸಿ.ಎಂ. ಆಗಿದ್ದಾಗ, ಧನ ಸಹಾಯ ಕೇಳಿ ಬರುತ್ತಿದ್ದ ಅರ್ಜಿಗಳನ್ನು ಅತ್ಯಂತ ಮುತುವರ್ಜಿಯಿಂದ, ಶೀಘ್ರವಾಗಿ ವಿಲೇವಾರಿ ಮಾಡುತ್ತಿದ್ದೆ. ಕಾರಣ ನನ್ನ ಪ್ರಜೆಗಳ ಪಾಲಿಗೆ ನಾನು ನಿಧಾನ ದ್ರೋಹಿಯಾಗಲಾರೆ. ಅದೆಷ್ಟೋ ಕಡತಗಳನ್ನು ಕ್ಷಣಗಳಲ್ಲಿ ವಿಲೇವಾರಿ ಮಾಡುತ್ತಿದ್ದೆ. ನನ್ನ ಆ ನಿರ್ಧಾರ ಒಬ್ಬ ಯುವಕನ ಬದುಕನ್ನು ಹೀಗೆ ಮರು ರೂಪಿಸಬಲ್ಲದು ಎಂದು ನಾನು ಅಂದುಕೊಂಡಿರಲಿಲ್ಲ.

ಆತನ ಮಾತು ಕೇಳಿ ಸಾವರಿಸಿಕೊಳ್ಳಲು ನನಗೆ ಕೆಲವು ಕ್ಷಣಗಲೇ ಬೇಕಾಯ್ತು. ನನ್ನ ಪ್ರತಿಕ್ರಿಯೆಗೂ ಕಾಯದೆ, ಆ ಯುವಕ ಹೊರಟೇ ಬಿಟ್ಟ. ಮೋದಿಜೀಗೆ ಕಾಯುತ್ತಿದ್ದ ಜನಸಾಗರದಲ್ಲಿ ಕರಗಿದ. ಭಾರತ್ ಮಾತಾಕೀ ಜೈ ಅನ್ನೋ ಘೋಷಣೆಗಳು ಅಲೆಅಲೆಯಾಗಿ ತೇಲಿ ಬರುತ್ತಿದ್ದವು…

ವಂದನೆಗಳೊಂದಿಗೆ,
ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ.

*******************************************************************

Tears of joy!

Many leaders tries to win the hearts of voters through crocodile tears!. Many of them even use few chemicals to get tears artificially to impress the voters. But I never believe in this tears politics. But on Tuesday, I also had tears in my eyes. But it was tears of Joy!. Thanks to a bike raider who made my day.!

On Tuesday, I was busy in campaign whole day. I started my day early to ensure that I can participate in Mr. Modiji’s rally. Indeed I was in hurry whole day. My intention was clear. I wanted to reach Mr.
Modiji’s rally venue early to ensure that I can interact with my party leaders, activists, supporters and voters over my election strategy, reaching out to more and more people etc. I was sure that lakhs of
voters from Bengaluru North region would attend Mr. Modiji’s rally and it was a golden opportunity for me to meet them all!

As expected, by evening all roads of the city were leading to Hosur road where Mr. Modiji was scheduled to address a mammoth rally. Peak hour jam, vehicle density were made travel a miserable task. Still I was filled with energy. I was looking at watch every second. My only wish; reaching the rally venue at the earliest.

But on the way, myself and my driver noticed a bike raider trying to over-take our car. At first I neglected it. But in side-mirror I found that, youth is repeatedly trying to overtake the car which is not a good sign on the chocked Hosur road. Still I neglected it.

I was entering the rally venue. But suddenly the bike raider over took me and parked bike infront of my car. I was surprised by this. Already there was big traffic jam and this would have added further to the misery of voters who were rushing to the rally.

Youth started coming towards me. I felt like he wants to speak to me. So I decided to open the window glasses. As he was nearing my car, I noticed tears in his eyes. I was shocked.

But once youth narrated his story, I had tears in my eyes. According to him, he was met with an accident nearly three years ago and had no money to get good treatment. He had applied for financial aid under Chief Minister’s Relief Fund without any hope of getting support on time. But government sanctioned money immediately. He took good treatment with the help of it and now running his own business successfully.

He shown me his bike and said “Sir, if you were not released money on time under the relief fund, I would have never got any treatment and would have become a handicap. But because of your support, I got treatment and now a successful businessman. Credit should go to you. My family starts the day with saluting to your photo,” he said.

No words. I can’t explain the feelings that were run through my mind. I virtually had tears in my eyes. As the Chief Minister of Karnataka, I never delayed clearance of any file related to medical aid. But I
never thought that my simple decision can bring such a change in any one’s life!

Thanking you,

Mr. D.V. Sadananda Gowda
BJP candidate, Bengaluru (North)


Follow Me

Facebook : https://www.facebook.com/sadanandagowda.official

Twitter : https://twitter.com/DVSBJP


080-2341 2999   |   sadanandagowda@yahoo.com   |   www.sadanandagowda.com
#7A, ITI Layout, 2nd Cross, New BEL Road, Bangalore – 560 094
Copyright©2014 D V Sadananda Gowda All Rights Reserved. Powered by Dhyeya

Website last updated on October 26, 2020 @ 3:59 AM