DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


SADAA DIARY – 2

 

SADAA DIARY – 2 www.sadanandagowda.com

Dear Friends,

ಗೌಡ್ರು ಬಂದ್ರು… ನಮ್ಮ ಸದಾ.. ಗೌಡ್ರು ಬಂದ್ರು..!

ಮೊದಲ ಘಟನೆ : ಶನಿವಾರ ಬೆಳ್ಳಂಬೆಳಗ್ಗೆಯೇ ನಮ್ಮ ಕಾರ್ಯಕರ್ತರು ಹಾಗೂ ಬೆಂಗಳೂರು ಉತ್ತರದ ಬಿಜೆಪಿ ನಾಯಕರೊಂದಿಗೆ ನಾನು ಪ್ರಚಾರಕ್ಕೆ ತೆರಳುತ್ತಿದ್ದೆ. ಇನ್ನೇನು ಸದಾಶಿವನಗರದ ಸಿಗ್ನಲ್ ರೆಡ್ ಲೈಟ್ ಬಂದಾಗ ನನ್ನ ಚಾಲಕ ವಾಹನವನ್ನು ಸಿಗ್ನಲ್ನಲ್ಲಿ ನಿಲ್ಲಿಸಿದ. ನನ್ನನ್ನು ಕಂಡ ಹತ್ತಾರು ಆಟೋಚಾಲಕರು ಸಿಗ್ನಲ್ನಲ್ಲೇ ಗಾಡಿ ನಿಲ್ಲಿಸಿ.. ಹೋ.. ನಮ್ಮ ಗೌಡ್ರು ಬಂದ್ರು, ಮಾಜಿ ಸಿಎಂ ಸದಾನಂದ ಗೌಡ್ರು ಬಂದ್ರು ಅಂತ ಓಡೋಡಿ ಬಂದ್ರು. ಹತ್ತಾರು ಜನ ನನಗೆ ಶುಭ ಹಾರೈಸಿದ್ರು. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಆರಂಭಿಸಿದ ಸಕಾಲ ಯೋಜನೆಯಿಂದ ಅವರುಗಳೂ ಸೇರಿದಂತೆ ಲಕ್ಷಾಂತರ ಆಟೋಚಾಲಕರಿಗೆ ವರದಾನವಾಗಿತ್ತು. ಕೇವಲ ನಾಲ್ಕೈದು ದಿನಗಳಲ್ಲಿ ಆಟೋಚಾಲಕರಿಗೆ ಸಕಾಲದ ಮೂಲಕ ಡೈವಿಂಗ್ ಲೈಸೆನ್ಸ್ ರಿನ್ಯೂವಲ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಹಿಂದೆ ತಿಂಗಳುಗಳ ಕಾಲ ಲೈಸೆನ್ಸ್ ಪಡೆಯಲು ಅಲೆದು ಅಲೆದು ಸುಸ್ತಾಗಿದ್ದ ನಮ್ಮ ಆಟೋ ಬಾಂಧವರು ನಾನು ಆರಂಭಿಸಿದ ಸಕಾಲ ಯೋಜನೆಯಿಂದಾದ ಅನುಕೂಲ, ನನ್ನ ಸಂತೋಷದ ಕ್ಷಣಕ್ಕೂ ಕಾರಣವಾಯಿತು. ಸಿಗ್ನಲ್ನಲ್ಲಿ ಅರೆ ಕ್ಷಣ ಟ್ರಾಫಿಕ್ ಜಾಮ್ ಆದರೂ, ಪ್ರಚಾರದ ಹಾದಿಯುದ್ದಕ್ಕೂ ಈ ಘಟನೆಯದೇ ಮೆಲುಕು.

ಬಾಂಧವ್ಯ ಮೂಡಿಸಿದ ಸಿಸಿ ಕ್ಯಾಮರಾ

ಸಾರ್, ನೀವು ಮುಖ್ಯಮಂತ್ರಿಗಳಾಗಿದ್ದಾಗ ನಾನು ನಿಮ್ಮ ಕಾರ್ಯವೈಖರಿಯನ್ನು ನೋಡುತ್ತಿದ್ದೆ. ಸಿಸಿ ಕ್ಯಾಮರಾ ಮೂಲಕ ನಿಮ್ಮ ಕಚೇರಿ ಕಾರ್ಯ ನಿರ್ವಹಣೆಗಳು ಆನ್ಲೈನ್ನಲ್ಲಿ ನೇರವಾಗಿ ಕಂಡು ಬರುತ್ತಿದ್ದವು. ಸಿಎಂ ಕಚೇರಿಯ ಹಾಗೂ ಗೃಹ ಕಚೇರಿಯ ಕಾರ್ಯನಿರ್ವಹಣೆ ಅಷ್ಟೊಂದು ಪಾರದರ್ಶಕವಾಗಿ ನಡೆಯುವುದನ್ನು ನೋಡಿ ಖುಷಿಪಟ್ಟೆವು. ಗ್ರೇಟ್ ಸರ್. ನಗರದ ವಿದ್ಯಾವಂತ ಯುವಕನೋರ್ವ ಪ್ರಚಾರದ ಸಮಯದಲ್ಲಿ ಸಿಕ್ಕು ಹಂಚಿಕೊಂಡ ಮಾತುಗಳು. ನಾನು ಮುಖ್ಯಮಂತ್ರಿಯಾಗಿದ್ದ ಅಷ್ಟೂ ದಿನಗಳ ಕಾರ್ಯ ನಿರ್ವಹಣೆಯನ್ನು ಮನೆಯಲ್ಲೇ ಕುಳಿತು ಈ ಯುವಕನಂತೆ ಈ ನಾಡಿನ ಅದೆಷ್ಟೋ ಯುವಕರು ಪರಿಶೀಲಿಸಿ ಖುಷಿ ಪಟ್ಟಿದ್ದಾರೆ ಎಂದರೆ ನನಗೆ ಅದಕ್ಕಿಂತ ದೊಡ್ಡ ಖುಷಿ ಇನ್ನೇನಿದೆ ?

ಸುಮ್ಮನೆ ಶನಿವಾರ ಬೆಳಗ್ಗಿನ ಎರಡು ಘಟನೆಗಳು ನನ್ನನ್ನು ದಿನದ ಪ್ರಚಾರದುದ್ದಕ್ಕೂ ಕಾಡಿವೆ. ನಾಡಿನ ಮತದಾರ ಪ್ರಬುದ್ಧನಾಗಿದ್ದಾನೆ. ಎಲ್ಲ ರಾಜಕಾರಣಿಗಳನ್ನು, ಈ ರಾಜಕೀಯ ವ್ಯವಸ್ಥೆಯನ್ನೂ ಆತ ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ.. ಅಧಿಕಾರ ಶಾಶ್ವತವಲ್ಲ. ಆದರೆ ಸಿಕ್ಕ ಅಧಿಕಾರವೆಂಬ ಅವಕಾಶವನ್ನು ಸರಿಯಾಗಿ ಜನತೆಯ ಹಿತ ದೃಷ್ಟಿಯಿಂದ ಬಳಸಿಕೊಂಡಲ್ಲಿ ಜನತೆ ನಮ್ಮ ಕೈಬಿಡುವುದಿಲ್ಲ ಎಂಬುದು ನನ್ನ ಭಾವನೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕುಗ್ರಾಮದಲ್ಲಿ ಹುಟ್ಟಿ ಪುತ್ತೂರು ತಾಲೂಕಿನ ಶಾಸಕನಾಗಿ, ವಿರೋಧ ಪಕ್ಷದ ಉಪನಾಯಕನಾಗಿ, ಮಂಗಳೂರು, ಉಡುಪಿ ಚಿಕ್ಕಮಗಳೂರು ಸಂಸದನಾಗಿ, ರಾಜ್ಯ ಬಿಜೆಪಿ ಅಧ್ಯಕ್ಷನಾಗಿ, ಮುಖ್ಯಮಂತ್ರಿಗಾದಿಗೆ ಏರುವವರೆಗೂ ನಾಡಿನ ಜನತೆ ನನ್ನನ್ನು ಕೈ ಹಿಡಿದ್ದಿದ್ದಾರೆ. ದೂರದ ಕರಾವಳಿಯ ದಕ್ಷಿಣ ಕನ್ನಡದಿಂದ ಬಂದ ನನನ್ನು ಉತ್ತರ ಬೆಂಗಳೂರಿನ ಲೋಕಸಭೆಯ ಅಖಾಡಕ್ಕಿಳಿಯುವ ಕ್ಷಣಗಳಿಗೆ ನಾಡಿನ ಜನತೆ ಸಾಕ್ಷಿಯಾಗಿಸಿದ್ದಾರೆ. ಪ್ರಚಾರದ ಉದ್ದಗಲಕ್ಕೂ ಬೆಂಗಳೂರು ಉತ್ತರದ ಹಿರಿಯರು, ಕಿರಿಯರು, ಮಹಿಳೆಯರು ನನಗೆ ಮನತುಂಬಿ ಹಾರೈಸುತ್ತಿರುವುದನ್ನು ಕಂಡಾಗ ನಿಜಕ್ಕೂ ಸಾರ್ಥಕ್ಯದ ಭಾವ ನನ್ನನ್ನು ಕಾಡಿದೆ.
ಕ್ಷೇತ್ರದುದ್ದಗಲಕ್ಕೂ ನಮ್ಮ ಬಿಜೆಪಿ ಕಾರ್ಯಕರ್ತರ ಸಂಚಾರ, ನಮ್ಮ ನಗುಮೊಗದ ಸದಾನಂದ ಗೌಡರನ್ನು ದೆಹಲಿಗೆ ಆರಿಸಿ ಕಳುಹಿಸಿಕೊಡಬೇಕು, ಎಂಬ ಜನರ ಭಾವ ಕಂಡು ಮೂಕ ವಿಸ್ಮಿತನಾಗಿದ್ದೇನೆ. ಬೆಂಗಳೂರು ಉತ್ತರದ ಲೋಕಸಭಾ ಕ್ಷೇತ್ರದ್ದುದ್ದಕ್ಕೂ ನಮ್ಮ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ವ್ಯಾಪಕ ಸಂಚಾರ ನಡೆಸುತ್ತಿರುವ ನಾನು ಕ್ಷೇತ್ರದ ಹಲವು ನಾಗರಿಕ ಸಮಸ್ಯೆಗಳೆಂಬ ಪ್ರಶ್ನೆಗಳಿಗೆ ನನ್ನ ಈ ಡೈರಿಯಲ್ಲಿ ’ಉತ್ತರ’ ನೀಡುವವನಿದ್ದೇನೆ.

ವಂದನೆಗಳೊಂದಿಗೆ,
ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ.

*******************************************************************

Morning Delight: Hearty Welcome!

On Saturday, I had started my campaign very early. I was on my way along with my supporters, activists and party leaders. At Sadashivanagar signal, my driver stopped the car as it was red signal. Tens of auto drivers who were busy taking the passengers saw me. For my surprise, they suddenly parked their autos on road and started rushing towards me. They were chanting Gowdru has come, former CM Sada Gowdru has come. They wished me heartily. For my surprise they were the few among the lakhs of auto drivers of the state who were benefited by the SAKALA (Karnataka Guarantee of Services to Citizens Act) scheme launched by my govt when I was the CM. Crores of people in this state were benefited by this scheme. Earlier auto drivers were forced to knock the doors of RTO office and run from pillar to post for renewal of their licenses. But now they need not to go to RTO several times. Their work will be done in couple of days and one visit is enough. Traffic was halted for few moments. Tears of happiness were rolling down from my eyes. A small initiative of my government today helped crores of people. Whole day I was filled with same thoughts.

CM LIVE: What an Idea Gowdaji!

Sir, when you were the CM, I was closely following your style of function. I was following CM LIVE through Karnataka government website. Every activities done in your CM office and Home office were streamed LIVE. I was happy to witness the transparency initiatives launched by you. You Are Simply Great Sir.
This was the opinion shared by an educated youth with me when I was campaigning. Fact is that this CM LIVE initiative was appreciated by one and all. Lakhs of youths in the state followed me LIVE when I was the CM. This is the movement of PRIDE!.

Serve people; they will bless you!

On Saturday, I could not able to come out of the hangover of these two incidents whole day. Today voters of the state are matured. He will not judge every party, every politician in the same way. Power is not permanent. But if you serve people honestly, they will never let you down. My birth place is Mandekol, a remote village in Sullia taluk of South Canara district. I started my career from grass root level and gradually become deputy leader of opposition in state assembly,Mangalore, Udupi-Chikmagalur MP, BJP state president and Chief Minister of the state. I am from South Canara district. But today people from Bengaluru North constituency have fielded me for Loksabha election. I feel blessed when thousands of people throng into my campaign meetings irrespective of caste, gender, religion.

Every BJP activist from this constituency is now working round the clock for my cause, my win. They are running like mercury to garner support my favor. When I saw activists moving like sea waves I get mesmerized.

I don’t have any words to express my gratitude to them. But I have answer for the people’s problems, grievances in my DIARY.

Thanking you,

Mr. D.V. Sadananda Gowda
BJP candidate, Bengaluru (North)


Follow Me

Facebook : https://www.facebook.com/sadanandagowda.official

Twitter : https://twitter.com/DVSBJP


080-2341 2999   |   sadanandagowda@yahoo.com   |   www.sadanandagowda.com
#7A, ITI Layout, 2nd Cross, New BEL Road, Bangalore – 560 094
Copyright©2014 D V Sadananda Gowda All Rights Reserved. Powered by Dhyeya

Website last updated on October 26, 2020 @ 3:59 AM