DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


SADAA DIARY – 1

 

SADAA DIARY – 1 www.sadanandagowda.com

Dear Friends,

ನಮ್ಮ ಬೆಂಗಳೂರಲ್ಲಿ ನಮ್ಮೂರವರು !

ಬಹುಶಃ ಇಂತಹ ಅನುಭವ ನಿಮಗೂ ಆಗಿರಬಹುದು. ಸಾವಿರಾರು ಜನರ ಮಧ್ಯೆ ಯಾರೋ ಒಬ್ಬರು ಸಾರ್ ನಾನು ನಿಮ್ಮೂರಿನವನು ಅಂದಾಗ ಹೋ.. ಹೌದಾ ಹೇಗಿದ್ದೀರಿ ? ಇಲ್ಲೇನು ಮಾಡುತ್ತೀರಿ ? ಎಲ್ಲಿಮನೆ ಎಂದು ಚರ್ಚಿಸುವುದು ಸಹಜ. ಒಂಥರಾ ಮರುಭೂಮಿಯಲ್ಲಿ ನೀರು ಸಿಕ್ಕಂತೆ, ಒಂಟಿತನ ಕಾಡುವಾಗ ಪರಿಚಿತನೊಬ್ಬ ಜೊತೆಯಾದಂತೆ.

ಇದನ್ನು ಯಾಕೆ ಹೇಳಿದೆನೆಂದರೆ ಮೊನ್ನೆ ಸೋಮವಾರ ನಮ್ಮ ಕರಾವಳಿ, ಉಡುಪಿ, ಚಿಕ್ಕಮಗಳೂರು ಭಾಗದ ಸದ್ಯ ಬೆಂಗಳೂರಿನ ನಿವಾಸಿಗಳೇ ಆಗಿರುವ “ಬೆಂಗಳೂರಿನವರೆಲ್ಲ” ನಗರದಲ್ಲಿ ಒಂದೆಡೆ ಸೇರಿದ್ದರು. ನಮ್ಮೂರ ಮಂದಿಯನ್ನು ಬೆಂಗಳೂರಲ್ಲಿ ಭೇಟಿಯಾಗುವ ಅಪರೂಪದ ಅವಕಾಶ ನನ್ನದಾಗಿತ್ತು. ಎಷ್ಟೋ ವರ್ಷಗಳಿಂದ ಅವರೆಲ್ಲ ಬೆಂಗಳೂರ ನಿವಾಸಿಗಗಳೇ ಆಗಿದ್ದಾರೆ. ನಮ್ಮ ತುಳುನಾಡಿನ ಭಾಷೆ, ತುಳುನಾಡಿವ ವೈವಿಧ್ಯಮಯ ತಿನಿಸು, ಒಂದಷ್ಟು ಕಾಡು ಹರಟೆ ಹೀಗೆ ಆ ಸಭೆಯಲ್ಲಿ ಮಾತು ಮಾತು ಮಾತು.

ನಮ್ಮ ಬೆಂಗಳೂರು ಒಂಥರಾ ಕಾಸ್ಮೋಪಾಲಿಟನ್ ಸಿಟಿ. ಎಲ್ಲರೂ ಇಲ್ಲಿದ್ದಾರೆ. ಕರಾವಳಿ, ಮಲೆನಾಡು, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹೀಗೆ ಎಲ್ಲೆಡೆಯ ಬಾಂಧವರು ನಮ್ಮೊಂದಿಗಿದ್ದಾರೆ. ಅಷ್ಟೇ ಅಲ್ಲ ಬೇರೆ ರಾಜ್ಯದ ನಮ್ಮ ಸಹೋದರ, ಸಹೋದರಿಯರೂ ಇಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರೆಂಬ ಬೃಹತ್ ಬೆಂಗಳೂರು ಯಾರಿಗೆ ಆಶ್ರಯ ನೀಡಿಲ್ಲ ಹೇಳಿ. ಒಂಥರಾ ವೈವಿಧ್ಯತೆಯ ನಗರಿ. ಅಂಥ ನಗರಿಯಲ್ಲಿ ನಮ್ಮೂರಿನವರೇ ಆಯೋಜಿಸಿದ್ದ ಸಭೆ ನನಗೆ ಹೊಸ ಹುಮ್ಮಸ್ಸು ನೀಡಿತು.

ರಾಜಧಾನಿ ಬೆಂಗಳೂರಿನ ಉತ್ತರ ಲೋಕ ಸಭಾಕ್ಷೇತ್ರದ ಉದ್ದಗಲಕ್ಕೂ ನನ್ನ ನೆಚ್ಚಿನ ಕಾರ್ಯಕರ್ತರು, ಸ್ಥಳೀಯ ನಾಯಕರನ್ನು ಒಳಗೊಂಡ ನಮ್ಮ ತಂಡ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವುದು ನಿಮಗೆ ಗೊತ್ತೇ ಇದೆ. ನರೇಂದ್ರ ಮೋದಿಯವರಂತಹ ದೂರದೃಷ್ಟಿತ್ವದ ನಾಯಕ ಈ ದೇಶದ ಪ್ರಧಾನಿ ಗಾದಿಯನ್ನು ಏರಲು ಸಹಕರಿಸಿ, ನನ್ನನ್ನು ಗೆಲ್ಲಿಸಿ ಎಂದು ನಮ್ಮವರಲ್ಲಿ ಮುಕ್ತವಾಗಿ ಕೇಳಿಕೊಂಡೆ.

ನೀವೊಬ್ಬ ಸ್ವಚ್ಛ ರಾಜಕಾರಣಿ. ಆ ಮೂಲಕ ನಮ್ಮೂರಿನ ಘನತೆಯನ್ನು ಎತ್ತಿ ಹಿಡಿದಿದ್ದೀರಿ. ಮನೆಮನೆ ಪ್ರಚಾರ ಮಾಡಿ ನಮ್ಮ ಬೆಂಗಳೂರಿಗರಿಗೆ ನಮ್ಮ ಸದಾನಂದ ಗೌಡರ ಕರ್ತವ್ಯ ನಿಷ್ಠೆ ಹಾಗೂ ದಕ್ಷತೆಯನ್ನು ಜನರಿಗೆ ತಿಳಿಸುತ್ತೇವೆ. ಯಾವುದೇ ಹಗರಣಗಳಿಲ್ಲದ ಸರ್ಕಾರ ನಡೆಸಿರುವ ಹೆಮ್ಮೆ ನಿಮ್ಮದು ಎಂದು ಸಾರ್ವಜನಿಕವಾಗಿ ಶುಭ ಹಾರೈಸಿದರು. ಸಾರ್ವಜನಿಕ ಜೀವನದಲ್ಲಿ ಇದಕ್ಕಿಂತ ಖುಷಿ ಇನ್ನೇನಿದೆ ಹೇಳಿ ?

ವಂದನೆಗಳೊಂದಿಗೆ,
ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ.

*******************************************************************

Colours of Cosmopolitan city!!!

You would have also experienced this feeling. Visualise a situation where you were one among a big crowd in a big city. Suddenly an unknown person nears you and says..Sir, I am also from your native place. It is natural that we start chatting about our village, job, house, place where we staying in this city etc. It is like Oasis in a big desert; an unknown person joining you while you are walking alone!.

You may ask me why I am saying all these. On Monday, I underwent such an emotional feeling. It was evening time. Those who were from Udupi, Chikmagalur, South Canara and other Coastal and Malnad regions of the state who have now become ‘Bengalureans’ were gathered at a place. I got a rare but unique opportunity of meeting them all. They have become Bengalureans in last few years. But they like their routes. Tulu language, variety of dishes and cuisines was there. We spoke about our Tulunaadu, introspected about the past, discussed about the future plans..every thing was informal. After everyone went…I turned around..I had tears in my eyes..It was like going down the memory lane…such a wonderful feeling…

Bangalore is a cosmopolitan city. It is like a mini-India. Brothers and sisters from all parts of the state are living here together. People from all parts of the country also joined us. City is like a miniature of India. This city has given shelter to all. Unity in diversity. This gathering boosted my energy, increased the confidence level..

I requested all…my team, my party, my fans, my friends and all have hit a powerful campaign trail across the Bengaluru North constituency. Support me to ensure that Mr. Narendra Modi will become Prime Minister who can rewrite the history of this country.

Crowd was enthusiastic. They told me, Mr. Gowdaji, you are a honest politician. You have upheld the dignity of “Nammuru”. We will knock doors of every house in Bengaluru North. We will educate votes about your honesty, efficiency and contribution to this state. You have the credit of leading a clean government.

I am humbled by their wishes!.

Thanking you,

Mr. D.V. Sadananda Gowda
BJP candidate, Bengaluru (North)


Follow Me

Facebook : https://www.facebook.com/sadanandagowda.official

Twitter : https://twitter.com/DVSBJP


080-2341 2999   |   sadanandagowda@yahoo.com   |   www.sadanandagowda.com
#7A, ITI Layout, 2nd Cross, New BEL Road, Bangalore – 560 094
Copyright©2014 D V Sadananda Gowda All Rights Reserved. Powered by Dhyeya

Website last updated on October 26, 2020 @ 3:59 AM