ಆಚಾರ್ಯ ದೇವೋಭವ -ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ನನ್ನ ಬದುಕನ್ನು ರೂಪಿಸಿದ, ಗುರುಸಮಾನರೇ ಆಗಿದ್ದ, ಬಂಧುಬಾಧವರಿಗಿಂತಲೂ ಮಿಗಿಲಾದ ಸ್ಥಾನದಲ್ಲಿದ್ದ ಡಾ|ವಿ.ಎಸ್.ಆಚಾರ್ಯ ಅವರನ್ನು ಕಳೆದುಕೊಂಡು ನಾನು ವಸ್ತುಶಃ ಅನಾಥನಾಗಿದ್ದೇನೆ ಅನಿಸುತ್ತಿದೆ. ನನ್ನ ಉದ್ದಶಿತ ಹಾದಿಯಲ್ಲಿ ನಾನು ಏಕಾಂಗಿಯಾದೆನೋ ಎಂಬ ಒಂಟಿತನದ ಭಾವನೆ ಕಾಡುತ್ತಿದೆ. ನಾನು ಸಾಮಾಜಿಕವಾಗಿ, ರಾಜಕೀಯವಾಗಿ, ಆಡಳಿತಾತ್ಮವಾಗಿ ಇಂದು ಯಾವುದೇ ಸ್ಥಾನಕ್ಕೆ ಏರಿದ್ದೇನೆ ಎಂದಾದರೆ ಅದಕ್ಕೆ ಡಾ| ಆಚಾರ್ಯರೇ ಕಾರಣಪುರಷರು. ನಿಜ ಅರ್ಥದಲ್ಲಿ ಅವರು ನನ್ನ ಆಚಾರ್ಯರು ನನ್ನ ರಾಜಕೀಯ ಜೀವನದಲ್ಲಿ ಈವರೆಗೆ ಯಾವುದೇ ಸಮಸ್ಯೆಗಳು ಬಂದರೂ ಅದಕ್ಕೆ ಅವರು [...]


