ಸದಾ ನಗು ಮೊಗದ ಡಿ.ವಿ.ಸದಾನಂದ ಗೌಡ ಅವರು ಸಂಸದರಾದ ಬಳಿಕ ಮಂಗಳೂರು ಲೋಕಸಭಾ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಜನರ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಮಾತ್ರವಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು ಮುಂದುವರಿಸಿದ್ದಾರೆ.
ಸಂಸತ್ ನಲ್ಲಿ ಬೀಡಿ ಉದ್ಯಮ , ರೈಲು ದಾರಿ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು, ಕಾಫಿ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆ , ದೂರವಾಣಿ ಸಂಪರ್ಕ, ತುಳು ಭಾಷೆಯನ್ನು ೮ನೇ ಪರಿಚ್ಚೇಧಕ್ಕೆ ಸೇರಿಸುವುದರ ಬಗ್ಗೆ, ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ಧಿ , ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವುದು, ಅರಣ್ಯ ಭೂಮಿ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ ಗೌಡರು.
ರಾಜ್ಯದಲ್ಲಿ ೨೦೦೪-೦೫ರಲ್ಲಿ ಉಂಟಾದ ಸಿಇಟಿ ಬಿಕ್ಕಟ್ಟು ನಿವಾರಣೆಗೆ ಕೇಂದ್ರದ ಹಸ್ತಕ್ಷೇಪಕ್ಕಾಗಿ ಹಾಗು ೨೦೦೫ರಲ್ಲಿ ಕರಾವಳಿ ಜಿಲ್ಲೆ ಮತ್ತು ಕರ್ನಾಟಕದ ವಿವಿಧ ಭಾಗದಲ್ಲಿ ಸಂಭವಿಸಿದ ನೆರೆಹಾವಳಿ ಸಮಸ್ಯೆ ಪರಿಹಾರಕ್ಕೆ ತಕ್ಷಣ ೧೦೦ ಕೋಟಿ ಬಿಡುಗಡೆ ಗೊಳಿಸಬೇಕು ಎಂದು ಶೂನ್ಯ ವೇಳೆಯಲ್ಲಿ ಗೌಡರು ಮಾಡಿದ ಒತ್ತಾಯ ಸ್ಮರಣೀಯ. (more…)






