DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


ಪರಿಚಯ

ಡಿ.ವಿ. ಸದಾನಂದಗೌಡ,
ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನ ಪರಿಷತ್ತು
ಹಾಗೂ ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಸ್ವ-ವಿವರ

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದದೇವರ ಗುಂಡಕುಟುಂಬದ ಸಾಮಾನ್ಯ ಮನೆತನಕ್ಕೆ ಸೇರಿದ ವೆಂಕಪ್ಪಗೌಡ ಮತ್ತು ಕಮಲದಂಪತಿಗಳ ಸುಪುತ್ರನಾಗಿ 1953ರಲ್ಲಿ ಸದಾನಂದಗೌಡರು ಜನಿಸಿದರು.

ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮುಗಿಸಿದ ಸದಾನಂದಗೌಡರು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಿಂದ ಬಿ.ಎಸ್ಸಿ.ಪದವಿಪಡೆದರು. ಆಬಳಿಕ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಶಿಕ್ಷಣವನ್ನು ಪೂರೈಸಿದರು. ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲಾಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿಯಾಗಿ ತನ್ನ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

1976ರಲ್ಲಿ ಸುಳ್ಯ ಮತ್ತು ಪುತ್ತೂರು ನಗರಗಳಲ್ಲಿ ವಕೀಲ ವೃತ್ತಿಯನ್ನಾರಂಭಿಸಿದ ಸದಾನಂದಗೌಡರು ಅಲ್ಪ ಅವಧಿಗೆ ಉತ್ತರಕನ್ನಡಜಿ ಲ್ಲೆಯ ಶಿರಸಿಯಲ್ಲಿ ಸರಕಾರಿ ಅಭಿಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಸಾಮಾಜಿಕ ಮತ್ತು ಸಾರ್ವಜನಿಕ ಜೀವನದಲ್ಲಿ ತಾನು ಇನ್ನಷ್ಟು ಸಕ್ರಿಯನಾಗಬೇಕಾದ ಅವಶ್ಯಕತೆಯನ್ನು ಮನಗಂಡ ಸದಾನಂದಗೌಡರು ಸರ್ಕಾರಿ ಅಭಿಯೋಜಕ ವೃತ್ತಿಗೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ತನ್ನನ್ನು ಸಾರ್ವಜನಿಕರಂಗದಲ್ಲಿ ತೊಡಗಿಸಿಕೊಂಡರು. 1981ರಲ್ಲಿ ಡಾಟಿಯವರನ್ನು ವಿವಾಹವಾದ ಸದಾನಂದಗೌಡರ ಪುತ್ರ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ.

ತನ್ನ ಸುದೀರ್ಘ ಸಾಮಾಜಿಕ ಜೀವನದುದ್ದಕ್ಕೂ ಸಮಾಜದ ವಿವಿಧರಂಗಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಸದಾನಂದಗೌಡರದ್ದು ನಿಜಕ್ಕೂ ಒಂದು ವೈವಿದ್ಯಮಯ ಬದುಕು. ಅವರ ಬಾಳಿನ ಪ್ರಮುಖ ಮಜಲುಗಳ ಪಕ್ಷಿನೋಟಇಲ್ಲಿದೆ.

ಸಹಕಾರಿ ರಂಗ:

ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದ ಸದಾನಂದಗೌಡರು ದಕ್ಷಿಣಕನ್ನಡ ಜಿಲ್ಲಾಕೇಂದ್ರ ಸಹಕಾರಿಬ್ಯಾಂಕಿನ ಉಪಾಧ್ಯಕ್ಷರಾಗಿ, ಎಸ್.ಕೆ.ಎ.ಸಿ.ಎಂ.  ಸೊಸೈಟಿಯ ನಿರ್ದೇಶಕರಾಗಿ ಸುಳ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ,  ಮಂಡೆಕೋಲು ಸೇವಾಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಭೂಅಡಮಾನ ಬ್ಯಾಂಕ್‌ಗಳ ಸಿಬಂಧಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.

ಕಾರ್ಮಿಕ ಆಂದೋಲನ:

ಶ್ರೀ ಡಿ.ವಿ. ಸದಾನಂದಗೌಡರು ಶ್ರಮಿಕ ವರ್ಗದ ನ್ಯಾಯೋಚಿತ ಹೋರಾಟಗಳಿಗೆ ನೇತೃತ್ವ ನೀಡುವ ಮೂಲಕಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರೆನಿಸಿಕೊಂಡಿದ್ದಾರೆ. ಸದಾನಂದಗೌಡರು ನಿರ್ವಹಿಸಿದ ಕಾರ್ಮಿಕರಂಗದ ವಿವಿಧಜವಾಬ್ದಾರಿಗಳು ಇಂತಿವೆ.
ಭಾರತೀಯ ಮಜ್ದೂರ್ಸಂಘದ ಪುತ್ತೂರು ವಿಭಾಗದ ಪ್ರಧಾನಕಾರ್ಯದರ್ಶಿ
ಸುಳ್ಯ ತಾಲೂಕು ಬೀಡಿ ಮಜ್ದೂರರ ಸಂಘದ ಅಧ್ಯಕ್ಷ 1977 ರಿಂದ 1982
ಸುಳ್ಯ ತಾಲೂಕು ಆಟೋರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ
ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷ

ರಾಜಕಾರಣ:

ನಾಡಿನ ರಾಜಕೀಯದ ಒಳ-ಹೊರಗುಗಳನ್ನು ಅರಿತುಕೊಳ್ಳಲು ಸಫಲವಾಗಿರುವ ಸದಭಿರುಚಿಯ ರಾಜಕಾರಣಿ ಸದಾನಂದಗೌಡರು ಭೂತಪೂರ್ವ ಜನಸಂಘದ ಪ್ರಾಥಮಿಕ ಸದಸ್ಯನಾಗಿ ರಾಜಕಾರಣಕ್ಕೆ ಧುಮುಕಿದವರು. ಭಾರತೀಯ ಜನತಾಪಾರ್ಟಿಯ ಸುಳ್ಯ ಕ್ಷೇತ್ರಸಮಿತಿಯ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲಾ ಬಿ.ಜೆ.ಪಿ.ಯುವಮೋರ್ಚಾದ ಅಧ್ಯಕ್ಷರಾಗಿ,  ದ.ಕ. ಜಿಲ್ಲಾ ಜಿ.ಜೆ.ಪಿ.ಯ ಉಪಾಧ್ಯಕ್ಷರಾಗಿ, ಯುವಮೋರ್ಚಾದ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಮತ್ತು ರಾಜ್ಯ ಬಿ.ಜೆ.ಪಿ.ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ವಿವಿಧಸ್ತರಗಳಲ್ಲಿ ಜವಾಬ್ದಾರಿಯನ್ನು ಹೊಣೆಯರಿತು ನಿಭಾಯಿಸಿದ ಸದಾನಂದಗೌಡರು 2006ರಿಂದ ರಾಜ್ಯ ಬಿ.ಜೆ.ಪಿ.ಯ ಚುಕ್ಕಾಣಿ ಹಿಡಿದು 2008ರಲ್ಲಿ ರಾಜ್ಯದಲ್ಲಿ ಪ್ರಪ್ರಥಮಬಾರಿಗೆ ಪೂರ್ಣಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಗಣನೀಯ ಪಾತ್ರವಹಿಸಿದ್ದಾರೆ.

ಏಪ್ರಿಲ್ 2013ರಲ್ಲಿ ಭಾರತೀಯಜನತಾ ಪಾರ್ಟಿಯ ಹಿರಿಯರಾಷ್ಟ್ರೀಯಉಪಾಧ್ಯಕ್ಷರಾಗಿ ನೇಮಕವಾಗಿ ಮೇ 2013ರವರೆಗೆ ಕಾರ್ಯನಿರ್ವಹಿಸಿರುತ್ತಾರೆ. ನಂತರ ಬದಲಾದ ಸನ್ನಿವೇಶದಲ್ಲಿ ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾಗಿ ನೇಮಕಗೊಂಡದ್ದರಿಂದ ಪಕ್ಷದ ಸಿದ್ಧಾಂತದಂತೆ (ಒಬ್ಬರಿಗೆಒಂದೇ ಹುದ್ದೆ) ರಾಷ್ಟ್ರೀಯ ಉಪಾಧ್ಯಕ್ಷ  ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿರುತ್ತಾರೆ.

ಶಾಸಕನಾಗಿ:

1989ರಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರು ವಿಧಾನ ಸಭಾಕ್ಷೇತ್ರದ ಬಿ.ಜೆ.ಪಿ.  ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸದಾನಂದಗೌಡರು 1994ರಲ್ಲಿ ಮೊತ್ತಮೊದಲ ಬಾರಿಗೆ ಶಾಸಕನಾಗಿ ಚುನಾಯಿತರಾಗಿ 1999ರಲ್ಲಿ ಪುನರಾಯ್ಕೆಯಾದರು. ಶಾಸಕನಾಗಿ ದ್ವಿತೀಯ ಅವಧಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ.ಶಾಸಕಾಂಗ ಪಕ್ಷದ ಉಪನಾಯಕನಾಗಿ ಆಯ್ಕೆಯಾದರು. ಹತ್ತುವರ್ಷಗಳ ಸುದೀರ್ಘಶಾಸಕತ್ವದ ಅವಧಿಯಲ್ಲಿ ಸದಾನಂದಗೌಡರು ನಿರ್ವಹಿಸಿದ ವಿವಿಧ ಜವಾಬ್ದಾರಿಗಳುಇಂತಿವೆ.

ಮಹಿಳಾ ದೌರ್ಜನ್ಯ ತಡೆಯ ಮೇಲಣ ಕರಡು ಮಸೂದೆ ರೂಪಿಸುವ ಸಮಿತಿಯ ಸದಸ್ಯ
ಶಕ್ತಿ, ಇಂಧನ ಮತ್ತು ವಿದ್ಯುಚ್ಛಕ್ತಿಯ ಕುರಿತಾದ ವಿಧಾನಸಭೆಯ ಸ್ಪೀಕರ್‌ರವರಿಂದ ರಚಿಸಲ್ಪಟ್ಟ ಸಮಿತಿಯ ಸದಸ್ಯ 2001 – 02
ರಾಜ್ಯಸರ್ಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ದಿಮೆಗಳ ಸಮಿತಿಯ ಸದಸ್ಯ 2002 – 03
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯನಾಗಿ ನಾಮನಿರ್ದೇಶನ 2003 – 04
ಪುತ್ತೂರು ವಿಧಾನ ಸಭಾಕ್ಷೇತ್ರದ ಆಶ್ರಯಸಮಿತಿಯ ಅಧ್ಯಕ್ಷನಾಗಿ ಹತ್ತುವರ್ಷಗಳಲ್ಲಿ ಸುಮಾರು 3500ಕ್ಕೂ ಮಿಕ್ಕಿದ ಆಶ್ರಯಮನೆಗಳ ವಿತರಣೆಮಾಡಿರುತ್ತಾರೆ.

ಪುತ್ತೂರು ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷನಾಗಿ ಹತ್ತುವರ್ಷಗಳಲ್ಲಿ 17000 ಕಡತಗಳನ್ನು ವಿಲೇವಾರಿ ಮಾಡಿ ಬಡ ಅರ್ಹಜನತೆಗೆ ಭೂಮಿಯನ್ನು ಸಕ್ರಮೀಕರಣಗೊಳಿಸಿದ್ದಾರೆ.
ಪುತ್ತೂರು ತಾಲೂಕು ಪಂಚಾಯತ್ ಉತ್ತಮ ಆಡಳಿತಕ್ಕಾಗಿ ರಾಜ್ಯದಲ್ಲಿಯೇ ಪ್ರಥಮಸ್ಥಾನ ಪಡೆಯಲು ತನ್ನ ಶಾಸಕತ್ವದ ಅವಧಿಯಲ್ಲಿ ಯೋಗ್ಯ ಹಾಗೂ ಸಮರ್ಥ ಮಾರ್ಗದರ್ಶನಮಾಡಿರುತ್ತಾರೆ.
ಅಡಿಕೆಗೆ ಬೆಂಬಲಬೆಲೆಗೆ ಆಗ್ರಹಿಸಿ ಬೃಹತ್ಪ್ರತಿಭಟನೆಯನ್ನು ಹಮ್ಮಿಕೊಂಡು ಚಿಂತಾಕ್ರಾಂತರಾಗಿದ್ದ ನಾಡಿನ ಅಡಿಕೆಬೆಳೆಗಾರರಿಗೆ ದಕ್ಷ ನೇತೃತ್ವ ನೀಡಿರುವುದು ಸದಾನಂದಗೌಡರ ಸಾಧನೆಗಳ ಕಿರೀಟಕ್ಕೊಂದು ತುರಾಯಿಯೆನಿಸಿದೆ.

ಸಂಸದನಾಗಿ:

ಜನರ ಸಮಸ್ಯೆಯ ಬೆನ್ನಟ್ಟಿ ಪರಿಹರಿಸುವ ಸದಾನಂದಗೌಡರ ಛಾತಿ 2004ರಲ್ಲಿ ಅವರು ಮಂಗಳೂರು ಸಂಸದರಾಗಿ ಆಯ್ಕೆಯಾದ ಬಳಿ ಕಅವರಿಗೆ ಅನೇಕ ಅವಕಾಶಗಳನ್ನು ನೀಡಿತು. ಅವರು ಸಂಸದರಾದ ಬಳಿಕ ಇವರನ್ನು ಭಾರತೀಯ ಜನತಾಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ ಪಕ್ಷವು ಇವರಿಗೆ ಗೋವಾರಾಜ್ಯದ ಪಕ್ಷವ್ಯವಹಾರಗಳ ಉಸ್ತುವಾರಿ ವಹಿಸಿದಾಗ ಸದಾನಂದಗೌಡರು ರಾಷ್ಟ್ರಮಟ್ಟದಲ್ಲಿಯೂ ಗುರುತಿಸಲ್ಪಟ್ಟರು. ಭಾರತ ಸರಕಾರ ಸದಾನಂದಗೌಡರನ್ನು 2005ರಲ್ಲಿ ಕೇಂದ್ರ ಕಾಫಿಬೋರ್ಡಿನ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿತು. ಭಾರತೀಯ ಜನತಾಪಾರ್ಟಿಯ ವರಿಷ್ಠರು ಸದಾನಂದಗೌಡರ ಕೈಗೆ 2006 ರಾಜ್ಯಬಿ.ಜೆ.ಪಿ. ಘಟಕದ ಚುಕ್ಕಾಣಿಯನ್ನು ನೀಡಿದರು. ನಾಡಿನಾದ್ಯಂತ ಮಿಂಚಿನಂತೆ ಸಂಚರಿಸಿ ಪಕ್ಷದ ವಲಯದಲ್ಲ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸಿದುದರ ಪರಿಣಾಮವಾಗಿ 2007ರಲ್ಲಿ ಇವರು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾಗಿ ಪುರಾಯ್ಕೆಯಾದರು.   ಮಾತ್ರವಲ್ಲ 2008ರಲ್ಲಿ ರಾಜ್ಯದಲ್ಲಿ ಮೊತ್ತಮೊದಲ ಪೂರ್ಣಪ್ರಮಾಣದ ಬಿ.ಜೆ.ಪಿ.ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಹೊಣೆಯರಿತು ಕೆಲಸಮಾಡಿ ಪಕ್ಷದ ಹಿರಿಯರ ಮೆಚ್ಚುಗೆಗೆ ಪಾತ್ರರಾದರು.

ಕರಾವಳಿ ಕರ್ನಾಟಕದ ವಿಶಿಷ್ಠಕಲೆಯಾದ ಯಕ್ಷಗಾನ, ಕರಾವಳಿಜಿಲ್ಲೆಗಳ ಜಾನಪದೀಯ ನಡವಳಿಗಳು, ಶಟ್ಲ್ಬ್ಯಾಡ್ಮಿಂಟನ್, ಟೆನ್ನಿಸ್ಮೊದಲಾದವುಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಸದಾನಂದಗೌಡರು ಜನಾನುರಾಗಿ, ಹೋರಾಟಗಾರ, ಸಂಘಟಕರು, ನಿಸ್ಪ್ರಹವ್ಯಕ್ತಿತ್ವದ, ಅಧ್ಯಯನಶೀಲ, ರಾಷ್ಟ್ರೀಯವಾದಿ ಮತ್ತು ಪ್ರಾಮಾಣಿಕಜನಸೇವಕನಾಗಿ ನಾಡಿನರಾಜಕಾರಣದಲ್ಲಿ ವಿಶಿಷ್ಠಛಾಪುಮೂಡಿಸಿರುವ ಡಿ.ವಿ. ಸದಾನಂದಗೌಡರು ಈಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕಮತಗಳ ಅಂತರದಿಂದ ಗೆದ್ದು ಬಂದು ಕರಾವಳಿ i ತ್ತುಮಲೆ ನಾಡಿನ ಜನರಸೇವೆಗೆ ಕಟಿಬದ್ಧರಾಗಿ ಕೆಲಸಮಾಡುತ್ತಿದ್ದಾರೆ.

ಸಂಸದರಾಗಿ ಮೊದಲ ವರ್ಷದಲ್ಲಿ ಕಾಫಿಬೆಳೆಗಾರರಿಗೆ ವಿಶೇಷಪ್ಯಾಕೇಜ್ಮಂಜೂರು ಮಾಡಿಸಿದುದು, ಇಂದಿರಾಗಾಂಧಿಯವರ ಕಾಲದಿಂದಲೇ ನನೆಗುದಿಗೆ ಬಿದ್ದಿದ್ದ ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲ್ವೇಲೈನಿನ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿರುವುದು, ಕರಾವಳಿಯ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 17ರ ಚತುಷ್ಪಥೀಕರಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವುದು, ಮೀನುಗಾರಿಕೆಗೆ ಕೇಂದ್ರದಿಂದ ಮಂಜೂರಾಗಲು ಬಾಕಿಯಿದ್ದ ಪ್ರೋತ್ಸಾಹಕ ಕ್ರಮಗಳನ್ನು ತ್ವರಿತ ಮಂಜೂರಾತಿ ಮಾಡಿಸಿರುವುದೇ ಮೊದಲಾದ-ಸಾಧನೆಗಳನ್ನು ಡಿ.ವಿ. ಸದಾನಂದಗೌಡರು ಸಾಧಿಸಿದ್ದಾರೆ.

ಪಕ್ಷಸಂಘಟನೆಯನ್ನು ಕೂಡಾ ಆದ್ಯತೆಯನೆಲೆಯಲ್ಲಿ ಮಾಡುತ್ತಿರುವ ಡಿ.ವಿ.ಸದಾನಂದಗೌಡರು ಕಡೂರು ಉಪಚುನಾವಣೆಯ ಪ್ರಚಾರಕಾರ್ಯದಲ್ಲಿ ಸಕ್ರಿಯರಾಗಿದ್ದು ಬಿ.ಜೆ.ಪಿ.ಯ ವಿಜಯಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಇದರ ಸಂಘಟನಾ ಕೌಶಲ್ಯದ ಮೇಲೆ ಅಪಾರ ವಿಶ್ವಾಸ ಹೊಂದಿರುವ ಬಿಜೆಪಿಯ ಕೇಂದ್ರೀಯ ನಾಯಕತ್ವ ಡಿ.ವಿ.ಯವರಿಗೆ ಬಿ.ಜೆ.ಪಿ. ಕೇರಳ ಘಟಕದ ಉಸ್ತುವಾರಿಯ ಹೊಣೆವಹಿಸಿತ್ತು.

ವಿರೋಧ ಪಕ್ಷದ ನಾಯಕರಾಗಿ:

ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ದಿನಾಂಕ 17-05-2013ರಂದು ಆಯ್ಕೆಗೊಂಡಿದ್ದು, ಕರ್ನಾಟಕ ವಿಧಾನ ಪರಿಷತ್ತಿನಲ್ಲಿಪಕ್ಷವನ್ನು ಯಶಸ್ವಿ ವಿರೋಧ ಪಕ್ಷವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ವಿಜೇತ ಕ್ಷೇತ್ರ-ರಾಜ್ಯ-ಪಕ್ಷ-ಪರಿವಾರ ಹೀಗೆ ಬಹುಮುಖೀ ಚಟುವಟಿಕೆಗಳಲ್ಲಿ ಡಿ.ವಿ.ಸದಾನಂದಗೌಡರು ತನ್ನನ್ನು ತೊಡಗಿಸಿಕೊಂಡಿದ್ದು ದಣಿವರಿಯದ ಕೆಲಸಗಾರರೆನಿಸಿದ್ದಾರೆ.

 


Copyright©2014 D V Sadananda Gowda All Rights Reserved. Powered by Dhyeya

Website last updated on February 26, 2020 @ 8:31 PM