December, 2010

ಗ್ರಾಮೀಣಾಭಿವೃದ್ಧಿಗೆ ಬಿಜೆಪಿಯಿಂದ ವಿಶೇಷ ಆದ್ಯತೆ-ಡಿ.ವಿ.ಸದಾನಂದ ಗೌಡ

Friday, December 24th, 2010

ಉಡುಪಿ : ಗ್ರಾಮೀಣಾಭಿವೃದ್ಧಿಗೆ ಬಿಜೆಪಿ ಪಕ್ಷವು ವಿಶೇಷ ಆದ್ಯತೆ ನೀಡುತ್ತಿದ್ದು, ರಾಜ್ಯದ ಬಿಜೆಪಿ ಸರ್ಕಾರ ಗ್ರಾಮೀಣ ಜನರ ಏಳಿಗೆಗಾಗಿ ಅಸಂಖ್ಯಾತ ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲವುಗಳ ಸದುಪಯೋಗ ಗ್ರಾಮೀಣ ಜನರಿಗೆ ಸುಲಭವಾಗಿ ತಲುಪಬೇಕಾಗಿದೆ. ಇದಕ್ಕಾಗಿ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಮತದಾರರನ್ನು ವಿನಂತಿಸಿದ್ದಾರೆ.

ಅವರು ಬುಧವಾರ ಹಿರಿಯಡ್ಕ, ಉದ್ಯಾವರ ಕಾಪು ಮತ್ತು ಎಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವಿವಿಧ ಸ್ಥಳಗಳಲ್ಲಿ ಮತದಾರರನ್ನು ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು. ಸಂಸದರ ಜತೆಗಿದ್ದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಕಳೆದ ಐದು ವರ್ಷಗಳಲ್ಲಿ ಕಾಪು ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಾದ ಅಭಿವೃದ್ಧಿ ಕಾರ್‍ಯಗಳ ವಿವರ ನೀಡಿದರು.

ಬಿಜೆಪಿ ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳಾದ ಉಪೇಂದ್ರ ನಾಯಕ್, ನಯನಾ ಗಣೇಶ್, ಕಟಪಾಡಿ ಶಂಕರ ಪೂಜಾರಿ, ಅರುಣ್ ಶೆಟ್ಟಿ, ತಾ.ಪಂ. ಅಭ್ಯರ್ಥಿಗಳಾದ ಅಶೋಕ್ ಶೆಟ್ಟಿಗಾರ್, ಸಂತೋಷ್ ಬೊಳ್ಜೆ, ಮಾಧವ ಅಂಚನ್, ಸತ್ಯಾನಂದ ನಾಯಕ್, ಶಾಂಭವಿ ಎಸ್. ಕುಲಾಲ್, ಬಿಜೆಪಿ ಪ್ರಮುಖರಾದ ಶ್ರೀನಿವಾಸ ಕಿಣಿ, ರಾಧಾಕೃಷ್ಣ ಶ್ರೀಯಾನ್, ಶಿವಪ್ರಸಾದ ಹೆಗ್ಡೆ, ಹರೀಶ್ ಶೇರಿಗಾರ್, ವಿಜಯ ಕರ್ಕೇರ, ನಿತ್ಯಾನಂದ ಶೆಟ್ಟಿ, ಜಗದೀಶ ಆಚಾರ್‍ಯ, ಕುಂಜೂರು ನಾಗರಾಜ ಶೆಟ್ಟಿ, ಮೊದಲಾದವರು ಸಂಸದರ ಜೊತೆಗಿದ್ದರು.

DVS Question on Blood Bank

Tuesday, December 7th, 2010

DVS Question on Eco Tourism Resorts

Saturday, December 4th, 2010

DVS Question on RGGVY

Thursday, December 2nd, 2010

DVS-Letter for Ban on Arecanut Import

Thursday, December 2nd, 2010