![]() |
![]() |
![]() |
![]() |
![]() |
ಕರ್ನಾಟಕದಲ್ಲಿ ಆರ್ಥಿಕ ಅಶಿಸ್ತು ಇದೆ. ಆರ್ಥಿಕ ದಿವಾಳಿತನವಾಗಿದೆ ಎಂಬಿತ್ಯಾದಿ ಕೂಗುಗಳಿಗೆ ಸ್ಪಷ್ಠ ಉತ್ತರವನ್ನು ಬಿಜೆಪಿ ಸರ್ಕಾರ ಈ ಬಜೆಟ್ ಮೂಲಕ ನೀಡಿದೆ. ಸಾಮಾನ್ಯ ಜನರ ಮೇಲೆ ಯಾವುದೇ ಹೊರೆ ನೀಡದೆ ಐಷಾರಾಮಿ ಜೀವನಕ್ಕೆ ಅಂಟಿಕೊಂಡವರಿಗೆ ಮಾತ್ರ ಸ್ಪಲ್ಪ ಹೊರೆಯಾಗುವ ತೆರಿಗೆ ಪದ್ಧತಿಯಿಂದ ಈ ಬಾರಿಯ ಬಜೆಟ್ ಶ್ರೀಸಾಮಾನ್ಯ ಬಜೆಟ್ ಆಗಿದೆ ಎಂಬುದನ್ನು ಎತ್ತಿತೋರಿಸುತ್ತಿದೆ. ಬೆಲೆ ಏರಿಕೆಗೆ ಮತ್ತಷ್ಟೂ ಪ್ರೋತ್ಸಾಹಿಸಿದ ಕೇಂದ್ರದ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಗೆ ವಿರುದ್ಧವಾಗಿ ಶ್ರೀಸಾಮಾನ್ಯನ ರಕ್ಷಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬದ್ಧರಾಗಿರುವುದು ಈ ಬಜೆಟ್‌ನಿಂದ ಸಾಬೀತಾಗಿದೆ.
ರಾಜಸ್ವ ಹೆಚ್ಚಳ ಕೇವಲ ೫೦೦ ಕೋಟಿಗಳು ಅಂದರೆ ಜಿಎಸ್‌ಡಿಪಿಯ ೦೦೧೫% ಮಾತ್ರ. ವಿತ್ತೀಯ ಕೊರತೆ ೯೭೦೮ ಕೋಟಿಗಲು ಅಂದರೆ ಜಿಡಿಪಿಯ ೨.೯೬% ಮಾತ್ರ ಅಂದರೆ ನಿಗದಿ ಪಡಿಸಿರುವ ಮಿತಿ ೪% ಒಳಗಡೆ ಮಿತಿಗೊಳಿಸಿದ್ದು ಆರ್ಥಿಕ ಶಿಸ್ತನ್ನು ಎತ್ತಿ ತೋರಿಸುತ್ತದೆ.
ಯಾವುದಕ್ಕೆ ಆಧ್ಯತೆ ಕೊಡಬೇಕಿತ್ತೋ ಅದಕ್ಕೆ ಆದ್ಯತೆ ನೀಡಿ ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿಗೆ ೧೦೭೧೬ ಕೋಟಿ ಮೀಸಲಿರಿಸಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ ಸಾಮಾಜಿಕ ಕ್ಷೇತ್ರಗಳಲ್ಲಿ ೩೮% ಹೆಚ್ಚಳ ಆರ್ಥಿಕ ವಲಯದಲ್ಲಿ ಶೇ ೩೨% ಹೆಚ್ಚಳ ಅತ್ಯಂತ ಪೂರಕ ವಿಚಾರಗಳು.
ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಗಾಗಿ ೨೫೦೦ ಕೋಟಿ ರೂ. ಮೀಸಲು, ವಾಣಿಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಕೃಷಿ ಸಾಲದ ಮೇಲೆ ಪಡೆಯುವ ೩% ಬಡ್ಡಿದರಕ್ಕಾಗಿ ರೂ. ೩೨೦ ಕೋಟಿ. ಪ್ರತೀ ಲೀ. ಹಾಲಿಗೆ ೨ ರೂ. ಪ್ರಕಾರ ಪ್ರೋತ್ಸಾಹ ಧನ ೩೨೦ ಕೋಟಿ ಸಾವಯವ ಕೃಷಿಗೆ ಉತ್ತೇಜನಕ್ಕಾಗಿ ೧೦೦ ಕೋಟಿ, ಯಶಸ್ವಿನಿಗೆ ೪೦ ಕೋಟಿ ನಿಜವಾಗಿಯೂ ಕೃಷಿ ಕ್ಷೇತ್ರದ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ಕರಾವಳಿಯ ಮೀನುಗಾರರಿಗೆ ಸರಬರಾಜು ಮಾಡುವ ಡೀಸೆಲ್ ಪ್ರಮಾಣವನ್ನು ೭೫ ಸಾವಿರ ಕಿ.ಲೋ ಲೀಟರ್‌ನಿಂದ ೮೫೦೦೦ ಕಿ.ಲೋ. ಲೀಟರ್‌ಗೆ ಏರಿಸಿರುವುದು ಮೀನುಗಾರರಿಗೆ ತುಂಬ ಸಹಕಾರಿಯಾಗಲಿದೆ.
ಪಂಚಾಯತ್ ಸಂಸ್ಥೆ ಆಡಳಿತದಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸಲು ೫೦% ಸ್ಥಾನ ಮೀಸಲು ಗ್ರಾಮೀಣ ಮಹಿಳೆಯರಿಗೆ ಗೌರವ ತರುವಂತದ್ದಾಗಿದೆ. ಸುವರ್ಣ ಗ್ರಾಮ ಯೋಜನೆಗೆ ೧೦೦೦ ಕೋಟಿ ರೂ. ಮೀಸಲು, ೫೦೦೦ ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ೧೫೦೦ ಕೋಟಿ ಸ್ವಾಗತಾರ್ಹ ಸಂಗತಿ.
ಹಿಂದುಳಿದ ಜಾತಿಗಳಾದ ಕಮ್ಮಾರ, ಕುಂಬಾರ, ಅಕ್ಕಸಾಲಿಗ, ಅಗಸರ ಸಂಕಷ್ಟಕ್ಕೆ ಸ್ಪಂದಿಸಿ ೨೦ ಕೋಟಿ ಈ ಸಮುದಾಯ ಅಭಿವೃದ್ಧಿಗೆ ಕುಂಭಕಲಾ ಅಭಿವೃದ್ದಿ ಮಂಡಳಿ ಸ್ಥಾಪನೆ. ಹಿಂದುಳಿದ ಈ ಸಮುದಾಯದ ಅಭಿವೃದ್ಧಿಗೆ ಪೂರಕ.
ನಗರಾಭಿವೃದ್ಧಿ, ರೈಲ್ವೆ ಯೋಜನೆಯಲ್ಲಿ ರಾಜ್ಯದ ಪಾಲು ಇವುಗಳಿಗೆ ಆಧ್ಯತೆ ನೀಡಿರುವುದು ಅಭಿವೃದ್ಧಿಶೀಲ ರಾಜ್ಯದ ಕಲ್ಪನೆಗೆ ಕೊಟ್ಟ ಒತ್ತಾಗಿರುತ್ತದೆ. ಬೆಂಗಳೂರು ನಗರಕ್ಕಂತೂ ಈ ಸರ್ಕಾರದ ಕೊಡುಗೆ ಅದ್ಭುತ. ಪ್ರವಾಸೋದ್ಯಮ ಮಾಹಿತಿ ತಂತ್ರಜ್ಷಾನ ಕೈಗಾರಿಕೆಗಳಿಗೂ ವಿಶೇಷ ಒತ್ತು ಕೊಟ್ಟ ಬಜೆಟ್ ಇದಾಗಿದೆ.
ಒಟ್ಟು ಅಂದಾಜು ೬೮೫೬೪ ಕೋಟಿಗಳ ಅಂದರೆ ಕಳೆದ ಸಾಲಿಗಿಂತ ೧೫.೩೬% ಹೆಚ್ಚಳದ ಬಜೆಟ್ ಸಾಮಾನ್ಯ ಜನರ ಬದುಕಿಗೆ ಭರವಸೆ ಕೊಟ್ಟಿರುವ ಯಡಿಯೂರಪ್ಪನವರು ಅಭಿನಂದನಾರ್ಹರು.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
(ಡಿ.ವಿ. ಸದಾನಂದ ಗೌಡ)