ಹೊಸದಿಲ್ಲಿ- ಸಂಸತ್ತು ಜುಲೈ ೧೫ ;
ಹೆಚ್ಚುತ್ತಿರುವ ವಾಹನಗಳ ದಟ್ಟಣೆ, ದಿನಂಪ್ರತಿ ಸಂಭವಿಸುವ ಅಪಘಾತಗಳ ನಿಯಂತ್ರಣಕ್ಕೆ ಕುಂದಾಪುರ- ಕಾಸರಗೋಡು ನಡುವಿನ ರಾ.ಹೆ. ೧೭ನ್ನು ತ್ವರಿತವಾಗಿ ಚತುಷ್ಪಥಗೊಳಿಸಲು ಮುಂದಾಗಬೇಕೆಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಡಿ.ವಿ. ಸದಾನಂದ ಗೌಡ ಆಗ್ರಹಿಸಿದ್ದಾರೆ.
ಸಂಸದರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಹಾಯಕ ಭೂಸಾರಿಗೆ ಸಚಿವರ ಆರ್.ಪಿ.ಎನ್.ಸಿಂಗ್ ಅವರು ಕುಂದಾಪುರ- ಕಾಸರಗೋಡು ನಡುವಿನ ರಾ.ಹೆ. ೧೭ರ ೧೩೧ ಕಿ.ಮೀ. ಮಾರ್ಗವನ್ನು ಚತುಷ್ಪಥಗೊಳಿಸಲು ೯೨೨ ಕೋ.ರೂ. ಕ್ರಿಯಾ ಯೋಜನೆ ಸಿದ್ದಗೊಂಡಿದೆ. ಈ ಪೈಕಿ ಸುರತ್ಕಲ್-ಮಂಗಳೂರು ನಡುವಿನ ೧೭.೩ ಕಿ.ಮೀ. ಭಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇದು ಇದೇ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಮಿಕ್ಕುಳಿದ ಭಾಗದ ಕಾಮಗಾರಿಯನ್ನು ರಾ.ಹೆ. ಪ್ರಾದಿಕಾರ ಕೈಗೆತ್ತಿಕೊಂಡಿದ್ದು ಕುಂದಾಪುರದಿಂದ ಕರ್ನಾಟಕ-ಕೇರಳ ಗಡಿವರೆಗಿನ ಕಾಮಗಾರಿಗೆ (ಸುರತ್ಕಲ್-ಮಂಗಳೂರು ಹೊರತುಪಡಿಸಿ) ಗುತ್ತಿಗೆದಾರರಿಂದ ಬಿಡ್ಡು ಪಡೆಯಲಾಗಿದೆ. ಗಡಿಯಿಂದ ಕಾಸರಗೋಡುವರೆಗಿನ ಭಾಗದ ಯೋಜನಾ ವರದಿ ತಯಾರಿ ಹಂತದಲ್ಲಿದೆ. ಸಮಗ್ರ ಯೋಜನೆಯನ್ನು ೨೦೧೩ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸುವ ಗುರಿ ಇರುವುದಾಗಿ ತಿಳಿಸಿದರು.
ಕನಿಷ್ಟಪಕ್ಷ ಶ್ರೀಮತಿ ಇಂದಿರಾ ಗಾಂಧಿಯವರ ಮೇಲಿನ ಗೌರವಕ್ಕಾದರೂ ಈ ಮಾರ್ಗಕ್ಕೆ ಮುಕ್ತಿ ಕಾಣಿಸಬಹುದಿತ್ತು.
ನವದೆಹಲಿ ಜು. ೮ (ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ಚರ್ಚೆ) : ೧೨ ವರ್ಷಗಳಷ್ಟು ಹಳೆಯದಾದ ೯೩ ಕಿ.ಮೀ. ಉದ್ದದ ಈ ಯೊಜನೆಯ ಅಂದಾಜುವೆಚ್ಚ ೧೨೨.೩೨ ಕೋಟಿ ರೂ. ಈವರೆಗೆ ಕೇವಲ ೭೧.೭೬ ಕೋಟಿ ರೂ. ಖರ್ಚು ಮಾಡಲಾಗಿದೆ. ಮತ್ತು ಪ್ರಸ್ತುತ ಬಜೆಟ್‌ನಲ್ಲಿ ಕೇವಲ ೫ ಕೋಟಿ ಹಂಚಿಕೆ ಮಾಡಿರುವುದು ಚಿಕ್ಕಮಗಳೂರಿನ ಜನತೆಗೆ ಮಾಡಿದ ಅಪಮಾನವಾಗಿದೆ.
ಒಂದು ಕಾಲದಲ್ಲಿ ಇಂದಿರಾಗಾಂಧಿ ಅವರಿಗಾಗಿ ಚಿಕ್ಕಮಗಳೂರು ಲೋಕಸಭಾ ಸೀಟನ್ನು ತೆರವು ಮಾಡಿದ್ದ ಕಟ್ಟಾ ಕಾಂಗ್ರೆಸ್ಸಿಗ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಪಕ್ಷದ ನಿರ್ಲಕ್ಷ್ಯದ ಧೋರಣೆಯಿಂದ ಬೇಸತ್ತು ಬಿಜೆಪಿ ಸೇರಿದರು.
ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ಮಂಗಳೂರು ಜಿಲ್ಲೆಗಳಿಗೆ ಬಜೆಟ್‌ನಲ್ಲಿ ದ್ರೋಹ ಬಗೆದಿರುವುದು ಖೇದದ ಸಂಗತಿ. ರಾಜ್ಯದ ಏಕೈಕ ಬಂದರು ಮಂಗಳೂರು. ಕಬ್ಬಿಣದ ಅದಿರು ಮುಂತಾದ ಮತ್ತಿತರೆ ಸರಕುಗಳ ರಪ್ತು ಚಟುವಟಿಕೆಗಳ ಕೇಂದ್ರ. ಬಹಳಷ್ಟು ಹೋರಾಟದ ನಂತರ ರಾತ್ರಿ ರೈಲಿನ ಮೂಲಕ ಮಂಗಳೂರು ಜನತೆಗೆ ರೈಲು ಸಂಪರ್ಕ ನೀಡಲಾಯಿತು. ೨೦೦೬-೦೭ರಲ್ಲಿ ಮಂಗಳೂರು -ಬೆಂಗಳೂರಿಗೆ ಮೂರು ರೈಲನ್ನು ಘೋಷಿಸಲಾಗಿತ್ತು. ಆದರೆ ಹಗಲು ರೈಲು ಈವರೆಗೂ ಹಗಲುಗನಸಾಗಿಯೇ ಉಳಿದಿದೆ. ಉಡುಪಿ-ಕುಂದಾಪುರ ಮಾರ್ಗವಾಗಿ ಕಾರವಾರಕ್ಕೆ ಸಂಪರ್ಕ ಕಲ್ಪಿಸಬೇಕಿದ್ದ ರಾತ್ರಿ-ಹಗಲು ರೈಲು ಕೂಡ ಮರೀಚೀಕೆಯಾಗಿ ಉಳಿದಿದೆ.
ಗಾಯದ ಮೇಲೆ ಉಪ್ಪು ಎರಚಿದಂತೆ ಬೆಂಗಳೂರು-ಮಂಗಳೂರು ರೈಲನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಿ ಕರವಾಳಿ ಜನರ ಹಕ್ಕನ್ನು ಕಿತ್ತುಕೊಳ್ಳಲಾಗಿದ್ದು ಅವರ ಆಶೋತ್ತರಗಳನ್ನು ಮೂಲೆಗುಂಪು ಮಾಡಲಾಗಿದೆ. ಈ ಕ್ರಮದ ಹಿಂದೆ ರಾಜಕೀಯ ಒತ್ತಡಗಳು ಕೆಲಸ ಮಾಡಿರುವುದು ನಿಚ್ಚಳ. ಈ ವಿಸ್ತರಣೆಯನ್ನು ರದ್ದುಮಾಡುವ ಜೊತೆಗೆ ಹಗಲು ರೈಲನ್ನು ಕಾರವಾರದ ತನಕ ಓಡಿಸಬೇಕು.
ಹುಬ್ಬಳ್ಳಿ- ಅಂಕೋಲಾ-ಕಾರವಾರ ಸಂಪರ್ಕ ಯೊಜನೆಗೆ ಆದ್ಯತೆ ದೊರೆಯಲಿ. ಬಜೆಟ್‌ನಲ್ಲಿ ಪ್ರಕಟಿಸಲಾದ ಮುಂಬಯಿ-ಕಾರವಾರ ರೈಲುಗಾಡಿಯಿಂದ ರಾಜ್ಯದ ಜನತೆಗೆ ಕಿಂಚಿತ್ತೂ ಉಪಯೋಗ ಇಲ್ಲ. ಈ ಗಾಡಿಯನ್ನು ಮಂಗಳೂರಿನ ತನಕ ವಿಸ್ತರಿಸಿದರೆ ಉಡುಪಿ-ಕುಂದಾಪುರದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದು.
ಬೆಂಗಳೂರು-ಮೈಸೂರು ನಡುವಣ ಜೋಡಿ ಹಳಿ ಮತ್ತು ಶ್ರವಣಬೆಳಗೊಳ-ಬೆಂಗಳೂರು ಮಾರ್ಗಗಳಿಗೆ ಹೆಚ್ಚು ಹಣ ನೀಡಬೇಕು.
ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉ.ಕ. ಜಿಲ್ಲೆಗಳಿಗೆ ಬಜೆಟ್‌ನಲ್ಲಿ ದ್ರೋಹ ಬಗೆದಿರುವುದು ಖೇದದ ಸಂಗತಿ.
ಪುತ್ತೂರು: ಜುಲೈ ೫
ಜುಲೈ ೫ ಶಿರಾಡಿ ಘಾಟ್ ರಸ್ತೆಯ ಕಾಂಕ್ರಿಟೀಕರಣಗೊಳಿಸಲು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಉದ್ದೇಶಿತ ಮಂಗಳೂರು-ಬೆಂಗಳೂರು ನಡುವಣ ಹಗಲು ರೈಲಿನ ಓಡಾಟವನ್ನು ಆರಂಭಿಸುವಂತೆ ಆಗ್ರಹಿಸಿ ಸಂಸತ್‌ನೊಳಗೆ ಪ್ರತಿಭಟನೆ ನಡೆಸಲಾಗುವುದು.
ಶಿರಾಡಿ ಘಾಟ್ ರಸ್ತೆಯನ್ನು ೨೨ ಕಿ.ಮೀ ಕಾಂಕ್ರೀಟೀಕರಣಗೊಳಿಸಲು ೮ ತಿಂಗಳ ಕಾಲಾವಧಿಯನ್ನು ಕಡಿಮೆಗೊಳಿಸಬೇಕು ಮತ್ತು ಕಾಮಗಾರಿ ವಿಳಂಬವಾಗುವುದನ್ನು ತಡೆಯ ಬೇಕು.
ಶಿರಾಡಿ ಘಾಟ್ ರಸ್ತೆಯ ಕಾಮಗಾರಿಯ ನಿಮಿತ್ತ ಬಂದ್ ಆಗಲಿರುವುದರಿಂದ ಮಂಗಳೂರು-ಬೆಂಗಳೂರು ನಡುವಣ ಎರಡು ಪ್ರಯಾಣಿಕ ರೈಲು ಓಡಾಟ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಹಗಲು ರೈಲಿಗಾಗಿ ಸಂಸತ್‌ನಲ್ಲಿ ಹೋರಾಟ ನಡೆಸಲಾಗುವುದು.
ಮಂಗಳೂರು -ಬೆಂಗಳೂರು ಹಗಲು ರೈಲು ಮತ್ತು ಮುಂಬಯಿ ಕಾರವಾರ ರೈಲು ಮಂಗಳೂರಿಗೆ ವಿಸ್ತರಣೆ ಕುರಿತಂತೆ ಕೇಂದ್ರದೊಂದಿಗೆ ಯಾವುದೇ ಸಂಧಾನ ಇಲ್ಲ.
ಅಲ್ಲದೆ ಶಿರಾಡಿ ಘಾಟ್ ರಸ್ತೆಯು ಕಾಂಕ್ರಿಟ್ ಕಾಮಗಾರಿಗಳಿಗಾಗಿ ಬಂದ್ ಆಗಿರುವ ಸಂದರ್ಭದಲ್ಲಿ ಬೆಂಗಳೂರು-ಮಂಗಳೂರಿಗೆ ಹೆಚ್ಚುವರಿ ಬಸ್‌ಗಳನ್ನು ಓಡಾಟ ನಡೆಸುವಂತೆ ವ್ಯವಸ್ಥೆ ಮಾಡಲು ರಾಜ್ಯದ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು.